• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮಗೂ ಈ ಪತ್ರಕ್ಕೂ ಸಂಬಂಧವಿಲ್ಲ ಎಂದ ಕೆಲವು ನಿವೃತ್ತ ಯೋಧರು

|

ನವದೆಹಲಿ, ಏ.12: ಸೇನೆಯನ್ನು ರಾಜಕೀಯ ವಿಷಯವಾಗಿ ಬಳಸಿಕೊಳ್ಳದಂತೆ ನಿರ್ದೇಶನ ನೀಡುವಂತೆ ಕೋರಿ ನಿವೃತ್ತ ಯೋಧರು ರಾಷ್ಟ್ರಪತಿಗಳಿಗೆ ಯಾವುದೇ ಪತ್ರವನ್ನು ಬರೆದಿಲ್ಲ ಇದು ಸುಳ್ಳು ಸುದ್ದಿ ಎಂದು ರಾಷ್ಟ್ರಪತಿ ಭವನದ ಮೂಲಗಳು ಸ್ಪಷ್ಟಪಡಿಸಿದೆ.

ಆ ಪತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾದ 150 ನಿವೃತ್ತ ಯೋಧರ ಪೈಕಿ ಶೇ.90ರಷ್ಟು ಮಂದಿ ನಾವು ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಸೇನೆಯ ಹೆಸರು ದುರ್ಬಳಕೆ: 150 ಹಿರಿಯ ಯೋಧರಿಂದ ರಾಷ್ಟ್ರಪತಿ ಕೋವಿಂದ್‌ಗೆ ಪತ್ರ

ಅದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಹೌದು ನಾನು ಪತ್ರಕ್ಕೆ ಸಹಿ ಹಾಕಿದ್ದೆ, ಪತ್ರವನ್ನು ಸಂಪೂರ್ಣವಾಗಿ ಓದಿದ ಬಳಿಕವೇ ಸಹಿ ಹಾಕಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ನಿಜವಾಗಿಯೂ ಪತ್ರ ಬರೆದಿದ್ದಾರೆಯೇ ರಾಷ್ಟ್ರಪತಿ ಭವನದಕ್ಕೆ ಆ ಪತ್ರ ತಲುಪಿದೆಯೇ ಇಲ್ಲವೇ ಎನ್ನುವುದೂ ಕೂಡ ಪ್ರಶ್ನೆಯಾಗಿಯೇ ಉಳಿದಿದೆ.

ಭಾರತೀಯ ಸೇನೆಗೆ 'ಮೋದಿ ಸೇನೆ' ಎಂದು ಹೇಳಿಕೆ ವಿಚಾರ ಪ್ರಸ್ತಾಪಿಸಿರುವ ಅವರು ಸೇನೆಯ ಹೆಸರನ್ನು ರಾಜಕೀಯ ಪಕ್ಷಗಳು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಭೂ ಸೇನೆಯ ಮೂವರು ನಿವೃತ್ತ ಮುಖ್ಯಸ್ಥರು, ವಾಯು ಸೇನೆಯ ನಿವೃತ್ತ ಮುಖ್ಯಸ್ಥರು, ನೌಕಾಪಡೆಯ ನಾಲ್ವರು ನಿವೃತ್ತ ಮುಖ್ಯಸ್ಥರು ಸೇರಿದಂತೆ ನಿರ್ದೇಶನ ನೀಡಲು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು ಇದೀಗ ಇದೆಲ್ಲವೂ ಸುಳ್ಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಷ್ಟೇ ಅಲ್ಲದೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಫೋಟೊವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿರುವ ಕುರಿತು ವಿರೋಧ ಕ್ತಪಡಿಸಿದ್ದಷ್ಟೇ ಅಲ್ಲದೆ ಸೇನೆಯನ್ನು ಮೋದಿ ಸೇನೆ ಎಂದು ಕರೆದಿದ್ದಕ್ಕೆ ಪತ್ರದ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. ಈ ಕುರಿತು ಸ್ಪಷ್ಟನೆ ಲಭ್ಯವಾಗಿದೆ.

ಯಾವ ಪತ್ರಕ್ಕೂ ನಾನು ಸಹಿ ಮಾಡಿಲ್ಲ

ಪತ್ರದಲ್ಲಿ ನಿವೃತ್ತ ಜನರಲ್ ಎಸ್‌.ಎಫ್‌.ರೊಡ್ರಿಗಸ್‌ ಸಹಿ ಇರುವುದಾಗಿಯೂ ಹೇಳಲಾಗಿತ್ತು. ಆದರೆ ತಾವು ಅಂತಹಾ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ , ಇದು ಸುಳ್ಳು ಎಂದು ರೊಡ್ರಿಗಸ್‌ರವರ ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಹಾಗೂ ಇತರೆ 148 ಮಿಲಿಟರಿ ಪರಿಣತರು ಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಈ ಸಂಬಂಧ ಕ್ರಮ ಕೈಗೊಳ್ಲಬೇಕೆಂದುರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ ಎಂಬ ಸುದ್ದಿ ಮಾದ್ಯಮಗಳಲ್ಲಿ ಹರಿದಾಡುತ್ತಿತ್ತು.

ಸೇನೆ ಚುನಾಯಿತ ಸರ್ಕಾರಕ್ಕೆ ಬೆಂಬಲ ನೀಡುತ್ತದೆ ಎಂದು ಬರೆದಿದ್ದೆ

ಈ ಪತ್ರಕ್ಕೆ ಸಹಿ ಹಾಕಿದ್ದ ಬಗ್ಗೆ ಏರ್ ಚೀಫ್ ಮಾರ್ಷಲ್ ಎನ್.ಸಿ.ಸೂರಿ ಮಾತನಾಡಿ ಇದು ಅಡ್ಮಿರಲ್ ರಾಮ್ ದಾಸ್ ಅವರ ಪತ್ರವಲ್ಲ, ಇದನ್ನು ಮೇಜರ್ ಚೌಧರಿ ಎಂಬ ಇನ್ನಾರೋ ಬರೆದಿದ್ದಾರೆ.ಇದು ನನ್ನ ಗಮನಕ್ಕೆ ಬಂದಂತೆ ಸತ್ಯವಾಗಿಯೂ ಬರೆದಿದ್ದಲ್ಲ, ಸಶಸ್ತ್ರ ಪಡೆಗಳು ರಾಜಕೀಯವಾಗಿ ಚುನಾಯಿತ ಸರ್ಕಾರಕ್ಕೆ ಬೆಂಬಲ ನೀಡುತ್ತಿವೆ ಎಂದು ನಾನು ಬರೆದಿದ್ದೇನೆ ಎನ್ನಲಾಗುತ್ತಿದ್ದು ಇದು ಸುಳ್ಳು, ಅಂತಹ ಯಾವುದೇ ಪತ್ರಕ್ಕೆ ನನ್ನ ಒಪ್ಪಿಗೆಯನ್ನು ತೆಗೆದುಕೊಂಡಿಲ್ಲ.ಆ ಪತ್ರದಲ್ಲಿ ಬರೆಯಲ್ಪಟ್ಟಿದ್ದರೂ ನಾನು ಒಪ್ಪಿಕೊಳ್ಳುವುದಿಲ್ಲ. . ರಾಮ್ ದಾಸ್ ಹೇಳಿದ್ದಾರೆ.

ನಾನು ಎಲ್ಲೂ ಸಹಿ ಹಾಕಿಲ್ಲ ಮಾಜಿ ಲೆಫ್ಟಿನೆಂಟ್ ಜನರಲ್ ಎಂಎಲ್ ನಾಯ್ಡು

ಪತ್ರದಲ್ಲಿ ಉಲ್ಲೇಖಿಸಿರುವ ಹಾಗೆ ಲಿಸ್ಟ್‌ನಲ್ಲಿರುವ 20ನೇ ಹೆಸರು ನನ್ನದಿದೆ ಆದರೆ ನಾನು ಯಾವ ಪತ್ರಕ್ಕೂ ಸಹಿ ಹಾಕಿಲ್ಲ ಇದೆಲ್ಲವೂ ಸುಳ್ಳು ಸುದ್ದಿ ಎಂದು ಮಾಜಿ ಲೆಫ್ಟಿನೆಂಟ್ ಜನರಲ್ ಎಂಎಲ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರಪತಿಗೆ ನೀಡಲಾಗಿದೆ ಎನ್ನಲಾದ ಪತ್ರದಲ್ಲೇನಿದೆ?

ಪತ್ರದಲ್ಲಿ ಭಾರತೀಯ ಸೇನೆಗೆ 'ಮೋದಿ ಸೇನೆ' ಎಂದು ಹೇಳಿಕೆ ವಿಚಾರ ಪ್ರಸ್ತಾಪಿಸಲಾಗಿದೆ. ಅವರು ಸೇನೆಯ ಹೆಸರನ್ನು ರಾಜಕೀಯ ಪಕ್ಷಗಳು ಪ್ರಸ್ತಾಪಿಸದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಎಲ್ಲಾ ನಿವೃತ್ತ ಯೋಧರ ಸಹಿ ಕೂಡ ಅದರಲ್ಲಿದೆ. ಅಷ್ಟೇ ಅಲ್ಲದೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಫೋಟೊವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿರುವ ಕುರಿತು ವಿರೋಧ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಸೇನೆಯನ್ನು ಮೋದಿ ಸೇನೆ ಎಂದು ಕರೆದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಹೌದು ನಾನು ಪತ್ರಕ್ಕೆ ಸಹಿ ಹಾಕಿದ್ದೇನೆ

ಮೇಜರ್ ಜನರಲ್ ಹರ್ಷ ಕಕ್ಕರ್ (ಪತ್ರದ 31ನೇ ಹೆಸರು) ಅವರು ಹೌದು ನಾನು ಪತ್ರಕ್ಕೆ ಸಹಿ ಹಾಕಿದ್ದೇನೆ, ಪತ್ರದಲ್ಲಿರುವ ವಿಷಯವನ್ನು ಸಂಪೂರ್ಣವಾಗಿ ಓದಿದ ಮೇಲೆಯೇ ಸಹಿ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

English summary
The President's office has denied receiving a letter from over 150 veterans expressing "alarm and disquiet" at the armed forces being used for "political purposes", sources in the office said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X