ಕೊರೊನಾ ಪರೀಕ್ಷೆಗೆ ಅನುಮತಿ ಪಡೆದ ಖಾಸಗಿ ಸಂಸ್ಥೆ
ದೆಹಲಿ, ಮಾರ್ಚ್ 18: ಜಾಗತಿಕ ಮಟ್ಟದಲ್ಲಿ ಕಂಟಕವಾಗಿರುವ ಕೊರೊನಾ ವೈರಸ್ ಭಾರತಕ್ಕೂ ಮಹಾಮಾರಿಯಾಗಿ ಪರಿಣಮಿಸಿದೆ. ದೇಶದಲ್ಲಿ ಕೊರೊನಾ ಸೋಂಕು ತಡೆಯಲು ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ.
ಸೋಂಕು ಹರಡದಂತೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಕೊರೊನಾ ಪರೀಕ್ಷೆ ಮಾಡಲು ಅಗತ್ಯ ಲ್ಯಾಬ್‌ಗಳನ್ನು ತೆರೆಯಲಾಗಿದೆ. ಬಹುತೇಕ, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪಿಸಿ ಚಿಕಿತ್ಸೆ ನೀಡುವಂತಹ ಪ್ರಯತ್ನ ಮಾಡಲಾಗುತ್ತಿದೆ.
ಇದೀಗ, ಕೊರೊನಾ ಸೋಂಕು ಪರೀಕ್ಷೆ ಮಾಡಲು ರೋಚೆ ಡಯಾಗ್ನೋಸ್ಟಿಕ್ಸ್ ಖಾಸಗಿ ಸಂಸ್ಥೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಕೊರೊನಾ ಟೆಸ್ಟ್ ಮಾಡಲು ಲೈಸೆನ್ಸ್ ಪಡೆದ ಮೊದಲ ಖಾಸಗಿ ಸಂಸ್ಥೆ ಇದಾಗಿದೆ. ಫುಡ್ ಆಂಡ್ ಡ್ರಗ್ ಆಡ್ಮಿನಿಷ್ಟ್ರೇಶನ್ (FDA) ರೋಚೆ ಡಯಾಗ್ನೋಸ್ಟಿಕ್ಸ್ ಸಂಸ್ಥೆಗೆ ಕೊರೊನಾ ಪರೀಕ್ಷೆ ನಡೆಸಲು ಕಾನೂನಾತ್ಮಕವಾಗಿ ಪರವಾನಗಿ ನೀಡಿದೆ.

ರೋಚೆ ಡಯಾಗ್ನೋಸ್ಟಿಕ್ಸ್ ಅನುಮತಿ ಪಡೆದ ಬೆನ್ನಲ್ಲೆ ಇನ್ನೊಂದು ಖಾಸಗಿ ಸಂಸ್ಥೆ ಬಯೋಮೆರ್ಲಕ್ಸ್ ಕೊರೊನಾ ಪರೀಕ್ಷೆ ನಡಸಲು ಅನುಮತಿ ಕೇಳಿ ಫುಡ್ ಆಂಡ್ ಡ್ರಗ್ ಆಡ್ಮಿನಿಷ್ಟ್ರೇಶನ್(FDA) ಮೊರೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬಯೋಮೆರ್ಲಕ್ಸ್ ಸಂಸ್ಥೆಯ ಕೋರಿಕೆಯನ್ನು ಪರಿಶೀಲಿಸಲು ಏಳು ದಿನಗಳು ಬೇಕಾಗುತ್ತದೆ. ಬಳಿಕವಷ್ಟೇ ಅನುಮತಿ ನೀಡಲಾಗುವುದು. ಒಂದು ವೇಳೆ ಬಯೋಮೆರ್ಲಕ್ಸ್ ಸಂಸ್ಥೆಗೂ ಕೊರೊನಾ ಟೆಸ್ಟ್ ಮಾಡಲು ಲೈಸೆನ್ಸ್ ಸಿಕ್ಕರೆ ಕಾರ್ಯ ಆರಂಭಿಸಬಹುದು.
ಹೀಗೆ, ಖಾಸಗಿ ಡಯಾಗ್ನೋಸ್ಟಿಕ್ಸ್ ಸಂಸ್ಥೆಗಳು ಕೊರೊನಾ ಪರೀಕ್ಷೆ ನಡೆಸಲು ಮುಂದೆ ಬಂದರೆ ಸ್ವಾಗತ ಎಂದು ಕೇಂದ್ರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಅನುಮತಿ ಪಡೆದುಕೊಂಡರು, ಐಸಿಎಂಆರ್ ಅಡಿಯಲ್ಲಿ ಈ ಡಯಾಗ್ನೋಸ್ಟಿಕ್ಸ್ ಸಂಸ್ಥೆಗಳು ಕೆಲಸ ನಿರ್ವಹಿಸಬೇಕಾಗಿದೆ.












Click it and Unblock the Notifications