ರಿಪಬ್ಲಿಕ್ ವಾಹಿನಿಯಲ್ಲಿ ಅರ್ನಬ್ ಗೋಸ್ವಾಮಿಯವರದ್ದೇ ಸಿಂಹಪಾಲು ಹೂಡಿಕೆ

ನವದೆಹಲಿ, ಫೆಬ್ರವರಿ.19: ಭಾರತದ ಪ್ರಸಿದ್ಧ ಸುದ್ದಿವಾಹಿನಿ ರಿಪಬ್ಲಿಕ್ ಟಿವಿಯ ಹೂಡಿಕೆಯಲ್ಲಿ ಯಾರ ಪಾಲು ಎಷ್ಟಿದೆ ಎಂಬುದರ ಬಗ್ಗೆ ಸ್ವತಃ ಸಂಸ್ಥೆಯೇ ಸ್ಪಷ್ಟನೆ ನೀಡಿದೆ. ಆ ಮೂಲಕ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ನಲ್ಲಿನ ಹೂಡಿಕೆ ಬಗೆಗೆ ಎಲ್ಲ ಊಹಾಪೋಹಗಳಿಗೆ ಉತ್ತರ ನೀಡಿದೆ.

ರಿಪಬ್ಲಿಕ್ ಟಿವಿಯ ಸಂಪಾದಕರಾಗಿರುವ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿಯವರೇ ಕಂಪನಿಯಲ್ಲಿ ಶೇ.80ರಷ್ಟು ಹೂಡಿಕೆ ಮಾಡಿದ್ದಾರೆ ಎಂದು ಸಂಸ್ಥೆಯು ಮಾಹಿತಿ ಬಹಿರಂಗಪಡಿಸಿದೆ. ಇನ್ನು, ಸುದ್ದಿ ವಾಹಿನ ಆರಂಭದ ದಿನಗಳಲ್ಲಿ ಸಂಸ್ಥೆಯ ಮಾಲೀಕರಾಗಿರುವ ಅರ್ನಬ್ ಗೋಸ್ವಾಮಿ ಶೇ.84ರಷ್ಟು ಬಂಡವಾಳವನ್ನು ಹೂಡಿದ್ದರು.

2019ರ ಫೆಬ್ರವರಿ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ವಿಸ್ತರಣೆ ಸಂದರ್ಭದಲ್ಲಿ ಅರ್ನಬ್ ಗೋಸ್ವಾಮಿ ಮಾಲೀಕತ್ವದ ಎಆರ್ ಜಿ ಔಟ್ ಲೆಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಶೇ.82ರಷ್ಟು ಷೇರುಗಳನ್ನು ಹೊಂದಿತ್ತು ಎಂದು ಸಂಸ್ಥೆ ತಿಳಿಸಿದೆ.

Republic Media Network Discloses Extent Of Arnab Goswamis Personal Sharaholding

ಭಾರತೀಯ ಮಾಧ್ಯಮಲೋಕದಲ್ಲಿ ಹೊಸ ಮೈಲಿಗಲ್ಲು:

ಭಾರತದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಮಾಲೀಕತ್ವದ ಮೂರು ಕಂಪನಿಗಳು ನೊಂದಾವಣಿಯಾಗಿವೆ. ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ನಲ್ಲಿ ವಾಸ್ತವದಲ್ಲಿ ಶೇ.82ರಷ್ಟು ಹೂಡಿಕೆ ಮಾಡಿದ್ದು, ಭಾರತೀಯ ಸುದ್ದಿ ಸಂಸ್ಥೆಯಲ್ಲಿ ಅತಿಹೆಚ್ಚು ಬಂಡವಾಳವನ್ನು ಹೂಡಿರುವ ಏಕೈಕ ಸಂಪಾದಕ ಎಂಬ ಖ್ಯಾತಿಯನ್ನು ಗಣಿಸಿದ್ದಾರೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+