ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾದ ಅಕ್ಷಯ್ ಇದು ಸರಿನಾ? ರಮ್ಯಾ ಪ್ರಶ್ನೆ
Recommended Video
ನವದೆಹಲಿ, ಮೇ 09: ಭಾರತೀಯ ನೌಕಾಪಡೆಯ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕಿಯಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಳಸಿದ್ದರು ಎಂದು ಪ್ರಧಾನಿ ಮೋದಿ ಅವರು ನೀಡಿದ್ದ ಹೇಳಿಕೆಯ ವಿರುದ್ಧವಾಗಿ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಭಾರತೀಯ ಯುದ್ಧ ನೌಕೆ ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾದ ಪ್ರಜೆ, ನಟ ಅಕ್ಷಯ್ ಕುಮಾರ್ ಕುಟುಂಬ ಸಮೇತ ಕಾಣಿಸಿಕೊಂಡಿದ್ದಾರೆ ಎಂದು ಅಕ್ಷಯ್ ಕುಟುಂಬ ನೌಕೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ರಮ್ಯಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಕೆನಡಾ ಪ್ರಜೆ ಅಕ್ಷಯ್ ಅವರನ್ನು ಯುದ್ಧನೌಕೆಗೆ ಕರೆದುಕೊಂಡು ಹೋಗಿದ್ದು ಸರಿಯೇ? ಯುದ್ಧ ನೌಕೆಯಲ್ಲಿ ನಟ ಅಕ್ಷಯ್ ಕುಮಾರ್, ಪತ್ನಿ ಟ್ವಿಂಕಲ್ ಖನ್ನಾ ಮತ್ತು ಪುತ್ರನನ್ನು ಕರೆದುಕೊಂಡು ಹೋಗಲಾಗಿದೆ. ನೀವು ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರೆ.
ಲಕ್ಷದೀಪದ ಮಾಜಿ ಆಡಳಿತಾಧಿಕಾರಿ ವಜಾಹತ್ ಹಬಿಬುಲ್ಲ ಅವರು ಪ್ರಧಾನಿ ಹೇಳಿಕೆಯನ್ನು ಅಲ್ಲಗೆಳೆದಿದ್ದರು. ಬೇಕಾದರೆ ಈ ಬಗ್ಗೆ ಅಮಿತಾಬ್ ರನ್ನು ಕೇಳಿದ್ದರು.ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಐಎನ್ಎಸ್ ವಿರಾಟ್ ವಿವಾದದ ಬಗ್ಗೆ ಏನು ಹೇಳುವಿರಿ ಎಂದು ರಮ್ಯಾ ಪ್ರಶ್ನಿಸಿದ್ದಾರೆ
| Array |
ಮೋದಿ ಮಾಡಿದ್ದು ಸರಿಯೇ?
ಅತ್ಯಂತ ದೊಡ್ಡ ಸುಳ್ಳುಗಾರ ಮೋದಿ ಎಂಬ ಹ್ಯಾಶ್ ಟ್ಯಾಗ್ ಬಳಸಿ, ಅಕ್ಷಯ್ ಅವರು ಐಎನ್ಎಸ್ ಸುಮಿತ್ರಾದಲ್ಲಿ ವಿಹರಿಸಿದ್ದರ ಬಗ್ಗೆ ರಮ್ಯಾ ಅವರು ಪ್ರಶ್ನಿಸಿದ್ದಾರೆ.
|
ಅದು ನೌಕಪಡೆಯ ಯುದ್ಧನೌಕೆ
ಅದು ನೌಕಪಡೆಯ ಯುದ್ಧನೌಕೆಯಲ್ಲ, ರಾಷ್ಟ್ರಪತಿ ಅವರ ಯಾಚ್, ಅವರ ಅನುಮತಿ ಇಲ್ಲದೆ ಪ್ರಧಾನಿ ಅವರು ಹೇಗೆ ಸಾರ್ವಜನಿಕರನ್ನು ಅಹ್ವಾನಿಸಲು ಸಾಧ್ಯ ಎಂದು ಪ್ರಶ್ನಿಸಲಾಗಿದೆ.
|
ಇದರಲ್ಲಿ ತಪ್ಪೇನು?
ಅಕ್ಷಯ್ ಕುಮಾರ್ ಅವರು ಯುದ್ಧನೌಕೆಯಲ್ಲಿ ವಿಹರಿಸಿದರೆ, ಅದರಲ್ಲಿ ತಪ್ಪೇನಿದೆ, ಹಿಂದಿ ಸಿನಿಮಾಗಳನ್ನು ನೋಡುವುದೇ ದೇಶದ ಭದ್ರತೆಗೆ ಅಪಾಯಕಾರಿ, ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ.
|
ಅಕ್ಷಯ್ ಕುಮಾರ್ ಬಗ್ಗೆ ಹೆಮ್ಮೆಯಿದೆ
ಸೈನಿಕರ ಬಗ್ಗೆ ನಟ ಅಕ್ಷಯ್ ಕುಮಾರ್ ಅವರಿಗೆ ಕಾಳಜಿಯಿದೆ. ಉಚಿತವಾಗಿ ಸ್ವಯಂ ರಕ್ಷಣೆ ಶಾಲೆ ನಡೆಸುತ್ತಿದ್ದಾರೆ, ಒಡಿಶಾ ಸಂತ್ರಸ್ತರಿಗೆ 1 ಕೋಟಿ ರು ನೀಡಿದ್ದಾರೆ. ಆದರೆ, ನೀವು ಮಂಡ್ಯಕ್ಕೆ ಬಂದು ವೋಟ್ ಮಾಡಿಲ್ಲವೇಕೆ?












Click it and Unblock the Notifications