ಪರಮಾತ್ಮಾ, ನಮಗೆ ಸಿಕ್ಕಂತಹ ನೆರೆಹೊರೆ ಯಾರಿಗೂ ಸಿಗದಿರಲಿ: ರಾಜನಾಥ್ ಸಿಂಗ್

ನವದೆಹಲಿ, ಆಗಸ್ಟ್ 8: ಪರಮಾತ್ಮಾ, ನಮಗೆ ಸಿಕ್ಕಂತಹ ನೆರೆಹೊರೆ ಯಾರಿಗೂ ಸಿಗದಿರಲಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೇವರಲ್ಲಿ ಕೇಳಿಕೊಂಡಿದ್ದಾರೆ.

ಪಾಕಿಸ್ತಾನದ ಕುರಿತು ಪರೋಕ್ಷವಾಗಿ ಮಾತನಾಡಿರುವ ಅವರು, ಎಲ್ಲದಕ್ಕಿಂತ ಹೆಚ್ಚು ಆತಂಕ ನಮ್ಮ ನೆರೆ ಹೊರೆಯವರ ಮೇಲಿರುತ್ತದೆ. ನೀವು ಸ್ನೇಹಿತರನ್ನು ಸುಲಭವಾಗಿ ಬದಲಿಸಿಕೊಳ್ಳಬಹುದು. ಆದರೆ ಅಕ್ಕಪಕ್ಕದವರನ್ನು ಬದಲಿಸುವ ಆಯ್ಕೆ ನಿಮ್ಮ ಬಳಿ ಇರುವುದಿಲ್ಲ.

ನಮ್ಮ ಪಕ್ಕದಲ್ಲಿ ಕುಳಿತಿರುವಂತಹ ನೆರೆಹೊರೆಯ ರೀತಿ ಯಾರಿಗೂ ಸಿಗದಿರಲಿ ದೇವರೇ ಎಂದು ಕೇಳಿಕೊಂಡಿದ್ದಾರೆ. ಜಮ್ಮು ಕಾಶ್ಮೀರದಿಂದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದು, ಇದಕ್ಕೆ ಪಾಕಿಸ್ತಾನ ಗರಂ ಆಗಿದ್ದು ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ 40 ಸಾವಿರಕ್ಕೂ ಹೆಚ್ಚಿನ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಲಾಗಿದೆ.

Rajnatha Singh Says Let No One Find The Neighborhood We have

ಪಾಕಿಸ್ತಾನವು ಮೊದಲು ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಭಾರತದ ವಿಮಾನ ತನ್ನ ಏರೋಸ್ಪೇಸ್ ನಲ್ಲಿ ಜಾಗವಿಲ್ಲ ಎಂದಿತ್ತು. ಈಗ ಕಾಶ್ಮೀರದ ಗಲಾಟೆ ಬಳಿಕ ಮತ್ತೆ ಅದೇ ನಿಲುವು ತಳೆದಿದೆ. ಅದಕ್ಕೆ ರಾಜನಾಥ್ ಸಿಂಗ್ ತಕ್ಕ ಉತ್ತರ ನೀಡಿದ್ದು, ನಮಗೆ ಸಿಕ್ಕಿರುವ ನೆರೆಹೊರೆಯ ರೀತಿ ಯಾರಿಗೂ ಸಿಗದಿರಲಿ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+