ರೈಲ್ವೆ ಪ್ರಯಾಣ ದರ ಏರಿಕೆಗೆ ಅಸ್ತು: ಸದಾನಂದ ಗೌಡ
ನವದೆಹಲಿ, ಜೂನ್ 20: ನಿರೀಕ್ಷೆಯಂತೆ ರೈಲ್ವೆ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದೆ. ಜೂನ್ 25ರಿಂದ ದರ ಏರಿಕೆ ಅನ್ವಯವಾಗಲಿದೆ.
ರೈಲ್ವೆ ಸಚಿವ ಡಿವಿ ಸದಾನಂದ ಗೌಡರು ತಮ್ಮ ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ ಪ್ರಯಾಣ ದರದ ಜತೆಜತೆಗೆ ಸಾಗಣೆ ದರವನ್ನೂ ಏರಿಸಿದ್ದಾರೆ. ಪ್ರಯಾಣ ದರ ಶೇ. 14.2 ಏರಿಕೆ ಮಾಡಲಾಗಿದೆ. ಸರಕು ಸಾಗಣೆ ದರವನ್ನು ಶೇ. 6.5 ಏರಿಸಲಾಗಿದೆ. ಗಮನಾರ್ಹವೆಂದರೆ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ಟಿನಲ್ಲಿ ಪ್ರಯಾಣ ದರವನ್ನು ಶೇ. 10ರಷ್ಟು ಏರಿಸಿದ್ದರು.

ರೈಲ್ವೆ ಸಚಿವ ಸದಾನಂದ ಗೌಡರು ತಾವು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ರೈಲ್ವೆ ಪ್ರಯಾಣ ದರ ಏರಿಕೆ ಬಗ್ಗೆ ಸುಳಿವು ನೀಡಿದ್ದರು. ಬಂಡವಾಳ ಹೆಚ್ಚಳ ಮಾಡಿಕೊಳ್ಳಲು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದರು. ರೈಲ್ವೆ ಮಂಡಳಿ ಸಲ್ಲಿಸಿದ್ದ ದರ ಏರಿಕೆ ಪ್ರಸ್ತಾವನೆಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದರು.
Railway passenger fare increased by 14.2 per cent with effect from today; freight charges go up by 6.5 per cent.
— Press Trust of India (@PTI_News) June 20, 2014 











Click it and Unblock the Notifications