ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರಿಗೆ ಹಣದುಬ್ಬರವೇ ದೀಪಾವಳಿ ಉಡುಗೊರೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

|
Google Oneindia Kannada News

ನವದೆಹಲಿ, ನವೆಂಬರ್ 2: ಭಾರತೀಯರಿಗೆ ಪ್ರಧಾನಿ ಮೋದಿ ನೀಡಿದ ದೀಪಾವಳಿ ಉಡುಗೊರೆಯೇ ಹಣದುಬ್ಬರ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ದೇಶದ ರೈತರು 'ಮಂಡಿಗೆ' ಮನವಿ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ, ಅವರಿಗೆ ತೀವ್ರ ಹಣದುಬ್ಬರದ ಕೊಡುಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಅವರು ಮಂಡಿಯ ಚಿತ್ರದೊಂದಿಗೆ, ಎಪಿಎಂಸಿ ಸುಧಾರಣೆಗೆ ರೈತರ ನಕಾರದ ವರದಿಗಳನ್ನು ಲಗತ್ತಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಸಹಾಯ ಕೇಳಿದ ಬಿಜೆಪಿ ಶಾಸಕಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಸಹಾಯ ಕೇಳಿದ ಬಿಜೆಪಿ ಶಾಸಕಿ

ದೇಶದಲ್ಲಿ ಕಾಣಿಸಿಕೊಂಡಿರುವ ಹಣದುಬ್ಬರದ ಸಮಸ್ಯೆಗೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸರ್ಕಾರ ಕಾರ್ಪೊರೇಟ್ ಉದ್ಯಮಿಗಳಿಗೆ ಉತ್ತೇಜನ ನೀಡಿ, ರೈತರು ಮತ್ತು ಬಡವರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

Rahul, Priyanka Slam Govt Over Inflation, Recession

ಪ್ರಿಯಾಂಕಾ ಗಾಂಧಿ, 'ಬಿಜೆಪಿಯಿಂದ ಜನರಿಗೆ ದೊರೆತಿರುವ ದೀಪಾವಳಿ ಉಡುಗೊರೆಯೆಂದರೆ ಅತಿಯಾದ ಹಣದುಬ್ಬರ. ಬಿಜೆಪಿಯಿಂದ ಉದ್ಯಮಿ ಸ್ನೇಹಿತರಿಗೆ ದೊರೆತಿರುವ ದೀಪಾವಳಿ ಕೊಡುಗೆಯೆಂದರೆ, ಆರು ವಿಮಾನನಿಲ್ದಾಣಗಳು. ಇದು ಉದ್ಯಮಿಗಳೊಂದಿಗೆ ಉದ್ಯಮಿಗಳ ಅಭಿವೃದ್ಧಿ' ಎಂದು ಲೇವಡಿ ಮಾಡಿದ್ದಾರೆ.

English summary
Congress leader Rahul Gandhi and Congress General Secretary Priyanka Gandhi Vadra on Monday slammed the government over inflation and recession, alleging that it is promoting capitalists and ignoring farmers and the poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X