ಸಾಮೂಹಿಕ ಅತ್ಯಾಚಾರ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಕಟು ಟೀಕೆ
Recommended Video

ನವದೆಹಲಿ, ಸೆಪ್ಟೆಂಬರ್ 18: ಸಾಮೂಹಿಕ ಅತ್ಯಾಚಾರಗಳ ಬಗ್ಗೆ ಮತ್ತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಟ್ವೀಟ್ ಮೂಲಕ ಕುಟುಕಿದ್ದಾರೆ.
ಹರ್ಯಾಣ ರಾಜ್ಯದಲ್ಲಿ ಸಿಬಿಎಸ್‌ಸಿ ಟಾಪರ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಖಂಡಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಭಾರತ ತನ್ನ ಮಗಳ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ಸಹಿಸಲಾರದೆ ನಾಚಿಕೆಯಿಂದ ನೇಣುಹಾಕಿಕೊಂಡಿದೆ' ಎಂದು ಕಟುವಾಗಿ ಟ್ವೀಟ್ ಮಾಡಿದ್ದಾರೆ.
India hangs its head in shame as another one of its daughters is brutally gang raped.
— Rahul Gandhi (@RahulGandhi) September 18, 2018
Prime Minister, your silence is unacceptable. Shame on a government that leaves India’s women unprotected and afraid and allows rapists to walk free.
ತಮ್ಮ ಖಾರವಾದ ಟ್ವೀಟ್‌ನಲ್ಲಿ ಮೋದಿ ಅವರನ್ನು ಟೀಕಿಸಿರುವ ಅವರು, 'ಮೋದಿ ಅವರ ಮೌನವನ್ನು ಸಹಿಸಲಾಗದು, ಮಹಿಳೆಯರಿಗೆ ರಕ್ಷಣೆ ನೀಡದ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಟು ಶಬ್ದಗಳನ್ನು ಬಳಸಿ ಟೀಕಿಸಿದ್ದಾರೆ.

ಹರ್ಯಾಣದಲ್ಲೇ ಕೆಲವೇ ದಿನಗಳ ಅಂತರದಲ್ಲಿ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಮೊನ್ನೆಯಷ್ಟೆ ಒಬ್ಬ ಸಿಬಿಎಸ್‌ಸಿ ಟಾಪರ್ ವಿದ್ಯಾರ್ಥಿಯನ್ನು ಬಸ್ ನಿಲ್ದಾಣದಿಂದ ಅಪಹರಣ ಮಾಡಿ ಅತ್ಯಾಚಾರ ಮಾಡಲಾಗಿತ್ತು. ಇಂದು ಮಹಿಳೆಯೊಬ್ಬರ ಮೇಲೆ ಇಬ್ಬರು ಅತ್ಯಾಚಾರ ಮಾಡಿದ್ದಾರೆ.
ಪಾಣಿಪತ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು. ಪ್ರಕರಣ ತನಿಖೆ ನಡೆಯುತ್ತಿದೆ.












Click it and Unblock the Notifications