ರಾಹುಲ್ ಗಾಂಧಿಯೇ ನನಗೂ ಬಾಸ್ ಎಂದ ಸೋನಿಯಾಗಾಂಧಿ

"ರಾಹುಲ್ ಗಾಂಧಿಯೇ ನನಗೂ ಬಾಸ್" ಎಂದು ಕಾಂಗ್ರೆಸ್ ನ ನಾಯಕಿ ಸೋನಿಯಾ ಗಾಂಧಿ ಪಕ್ಷದ ಸಂಸದೀಯ ಸಭೆಗೆ ತಿಳಿಸಿದ್ದಾರೆ. "ಆತ ಈಗ ನನಗೂ ಬಾಸ್. ಅದರಲ್ಲಿ ಅನುಮಾನವೇ ಬೇಡ. ಮತ್ತು ನನಗೆ ಗೊತ್ತು, ನೀವೆಲ್ಲ ರಾಹುಲ್ ಜತೆಗೆ ಅದೇ ವಿಶ್ವಾಸ, ಉತ್ಸಾಹ ಹಾಗೂ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತೀರಿ" ಎಂದಿದ್ದಾರೆ.

ರಾಹುಲ್ ಗಾಂಧಿ ಕಾಂಗ್ರೆಸ್ ನ ಚುಕ್ಕಾಣಿ ಹಿಡಿದಿರುವುದು ಹಾಗೂ ಎಲ್ಲರೂ ನಾಯಕತ್ವ ಒಪ್ಪಬೇಕು ಎಂಬ ಸಂದೇಶ ರವಾನಿಸಿದ ನಂತರ, ಬಿಜೆಪಿ ವಿರುದ್ಧದ ಸಭೆಗಳಲ್ಲಿ ತಾವೇ ಮುಂಚೂಣಿ ವಹಿಸುವುದಾಗಿ ಕೂಡ ತಿಳಿಸಿದ್ದಾರೆ. "ನಾನು ಕಾಂಗ್ರೆಸ್ ನ ಸಂಸದೀಯ ಸಭೆಯ ಮುಖ್ಯಸ್ಥೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಇತರ ಸಹೋದ್ಯೋಗಿಗಳ ಜತೆಗೆ ಸೇರಿ ಕೆಲಸ ಮಾಡ್ತೀನಿ. ಸಮಾನ ಮನಸ್ಕ ರಾಜಕೀಯ ಪಕ್ಷಗಳ ಜತೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ" ಎಂದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಸೋಲಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆ ಆಗಬೇಕು. ಜಾತ್ಯತೀತ, ಸಹಿಷ್ಣು ಹಾಗೂ ಆರ್ಥಿಕ ಪ್ರಗತಿಯ ಹಾದಿಯಲ್ಲಿ ಸಾಗಬೇಕು" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Rahul Gandhi Now My Boss Too : Sonia Gandhi

"ದೇಶದ ಎಲ್ಲ ವರ್ಗದ ಜನರು ಆಡಳಿತಾರೂಢ ಸರಕಾರದಿಂದ ಭ್ರಮನಿರಸನರಾಗಿದ್ದಾರೆ. ಈ ಪರಿಸ್ಥಿತಿಯನ್ನು ನಮ್ಮ ಬೆಂಬಲವಾಗಿ ಮಾರ್ಪಾಟು ಮಾಡಿಕೊಳ್ಳಬೇಕು. ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ರಾಜಸ್ತಾನದಲ್ಲಿನ ದೊಡ್ಡ ಗೆಲವು ಬದಲಾವಣೆ ಗಾಳಿ ಬೀಸುತ್ತಿರುವುದನ್ನು ಸೂಚಿಸುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್ ನ ಮರುಹುಟ್ಟಿಗೆ ಸಾಕ್ಷಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+