ನಾಯಿ ಜೊತೆ ಕಾರಲ್ಲಿ ರಾಹುಲ್ ಗಾಂಧಿ ಫನ್ ರೈಡ್: ವೈರಲ್ ಚಿತ್ರ
Recommended Video
ನವದೆಹಲಿ, ಮೇ 29: ಲೋಕಸಭೆ ಚುನಾವಣೆಯ ಸೋಲು, ಕಾಂಗ್ರೆಸ್ ಅಧ್ಯಕ್ಷಗಿರಿಯ ರಾಜೀನಾಮೆ, ಪಕ್ಷ ಪುನರ್ ಸಂಘಟನೆಯ ಚಿಂತನೆ ಹೀಗೆಲ್ಲ ಸಾಲು ಸಾಲು ಭಾರಗಳನ್ನು ಹೊತ್ತಿರುವ ರಾಹುಲ್ ಗಾಂಧಿ ಏನು ಮಾಡುತ್ತಿರಬಹುದು? ಸದ್ಯಕ್ಕೆ ಅವರು ಸಾರ್ವಜನಿಕರ ಕಣ್ಣಿನಿಂದ ದೂರವೇ ಉಳಿದಿದ್ದಾರೆ.
ಆದರೆ, ಈ ಸೋಲುಗಳ ಹತಾಶೆಯಿಂದ ಹೊರಬರಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ತಮ್ಮ ಪ್ರೀತಿಯ ನಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಅವರು ಫನ್ ರೈಡ್ ತೆರಳಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮವನ್ನು ಹೊರತುಪಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಹುತೇಕ ಸಾರ್ವಜನಿಕ ಓಡಾಟದಿಂದ ದೂರವಿದ್ದಾರೆ. ಈ ನಡುವೆ ಅವರು ತಮ್ಮ ನೆಚ್ಚಿನ ನಾಯಿ 'ಪಿಡಿ' ಜತೆ ಕಾರಿನಲ್ಲಿ ತೆರಳುವ ಚಿತ್ರವನ್ನು ಸಾರ್ವಜನಿಕರೊಬ್ಬರು ಕ್ಲಿಕ್ಕಿಸಿದ್ದಾರೆ. ಈಗ ಅದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ನವದೆಹಲಿಯ ತುಘ್ಲಕ್ ಮಾರ್ಗದಲ್ಲಿರುವ ತಮ್ಮ ನಿವಾಸದಿಂದ ರಾಹುಲ್ ಗಾಂಧಿ ಕಾರನ್ನು ಸ್ವತಃ ಚಲಾಯಿಸಿಕೊಂಡು ತೆರಳಿದ್ದು, ಹಿಂಬದಿಯ ಸೀಟಿನಲ್ಲಿ ಅವರ ಅಚ್ಚುಮೆಚ್ಚಿನ ನಾಯಿ 'ಪಿಡಿ' ಕುಳಿತುಕೊಂಡಿತ್ತು. ಈ ಚಿತ್ರದಲ್ಲಿ ರಾಹುಲ್ ಮತ್ತು ಪಿಡಿ ಇಬ್ಬರೂ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕೂಡಲೇ ಟ್ವಿಟ್ಟರಿಯನ್ನರು ಅದನ್ನು ಹಂಚಿಕೊಳ್ಳತೊಡಗಿದ್ದಾರೆ. ಕೆಲವರು ರಾಹುಲ್ ಗಾಂಧಿ ಅವರ ಕಾಲೆಳೆದರೆ, ಇನ್ನು ಕೆಲವರು ಮುದ್ದಾದ ನಾಯಿಮರಿಯ ಮೇಲೆ ಪ್ರೀತಿ ತೋರಿಸಿದ್ದಾರೆ.
ರಾಹುಲ್ ಗಾಂಧಿ ಅವರು 2017ರಲ್ಲಿ ತಮಾಷೆಯ ವಿಡಿಯೋ ಮೂಲಕ ಟ್ವಿಟ್ಟರ್‌ನಲ್ಲಿ ತಮ್ಮ ನೆಚ್ಚಿನ ನಾಯಿ 'ಪಿಡಿ'ಯನ್ನು ಪರಿಚಯಿಸಿದ್ದರು.
|
ನಾಯಿಯೊಂದಿಗೆ ರಾಹುಲ್ ಗಾಂಧಿ
ಈ ಚಿತ್ರವನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಛಾಯಾಗ್ರಾಹಕ ಅನಿಲ್ ಶರ್ಮಾ ಎಂಬುವವರು ಮೊದಲು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ನವದೆಹಲಿಯಲ್ಲಿ ಕಾಣಿಸಿದ್ದು ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
|
ಪಿಡಿ ಪರಿಚಯಿಸಿದ್ದ ರಾಹುಲ್
'ಈ ವ್ಯಕ್ತಿ ಪರವಾಗಿ ಯಾರು ಟ್ವೀಟ್ ಮಾಡುತ್ತಾರೆ ಎಂದು ಜನರು ಕೇಳುತ್ತಿದ್ದರು. ಇದು ನಾನು. ಪಿಡಿ. ನಾನು ಅವರಿಗಿಂತಲೂ ಹೆಚ್ಚು ಕೂಲ್. ಟ್ವೀಟ್ ಜತೆ ನಾನೇನು ಮಾಡಬಲ್ಲೆ ನೋಡಿ.. ಊಪ್ಸ್,,, ಟ್ರೀಟ್' ಎಂದು ರಾಹುಲ್ ಗಾಂಧಿ ಅವರು 2017ರಲ್ಲಿ ಟ್ವೀಟ್ ಮಾಡಿದ್ದರು.
|
ಸಾಮಾನ್ಯ ಮನುಷ್ಯ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದಾರೆ ಎಂದು ಸುರೇಂದ್ರ ತಲ್ಲಪೆಳ್ಳಿ ಎಂಬುವವರು ಈ ಫೋಟೊವನ್ನು ನೋಡಿ ಕೊಂಡಾಡಿದ್ದಾರೆ.
|
ಒಳ್ಳೆಯ ಕೆಲಸ
ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ತಮ್ಮ ನಾಯಿ ಪಿಡಿಯನ್ನು ಕಾರ್‌ನಲ್ಲಿ ಕರೆದುಕೊಂಡು ಡ್ರೈವ್ ಹೋಗಿದ್ದರು. ಮುಂದಿನ ಐದು ವರ್ಷಕ್ಕೆ ಅವರು ಆಯ್ಕೆ ಮಾಡಿಕೊಂಡ ಗುರಿ ಒಳ್ಳೆಯ ಕೆಲಸ. ಶುಭವಾಗಲಿ ಎಂದು ಕೆ. ಕುಮಾರ್ ರಾವ್ ಎಂಬುವವರು ಕಾಲೆಳೆದಿದ್ದಾರೆ.
|
ಸುಂದರವಾಗಿ ಸೆರೆಹಿಡಿದಿದ್ದಾರೆ
ಈ ಚಿತ್ರವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಅದ್ಭುತವಾದ ಟೈಮಿಂಗ್. ನಿಜಕ್ಕೂ ನಿಮಗೆ ಹದ್ದಿನ ಕಣ್ಣು ಇದೆ ಎಂದು ಟೈಮ್ಸ್ ನೌ ಪತ್ರಕರ್ತೆ ಸಮಿಯಾ ಕಪೂರ್ ಎಂಬುವವರು ಅನಿಲ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ.












Click it and Unblock the Notifications