ಮೋದಿ ಸಂದರ್ಶನ ಮಾಡಿದ ಸಂಪಾದಕಿಗೆ ರಾಹುಲ್ ಗಾಂಧಿ ಟಾಂಗ್‌

ನವದೆಹಲಿ, ಜನವರಿ 02: ನರೇಂದ್ರ ಮೋದಿ ಅವರು ನಿನ್ನೆ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದ ಬಗ್ಗೆ ರಾಹುಲ್ ಗಾಂಧಿ ತಕರಾರು ಎತ್ತಿದ್ದಾರೆ.

ಮೋದಿ ಅವರನ್ನು ಸಂದರ್ಶನ ಮಾಡಿದವರು, ಪ್ರಶ್ನೆಯ ಜೊತೆಗೆ ಉತ್ತರಗಳನ್ನೂ ನೀಡುತ್ತಿದ್ದರು ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.

ಮೋದಿ ಅವರನ್ನು ಎಎನ್‌ಐ ಸುದ್ದಿ ಸಂಸ್ಥೆ ಸಂಪಾದಕಿ ಸ್ಮಿತಾ ಪ್ರಕಾಶ್ ಅವರು ಸಂದರ್ಶನ ಮಾಡಿದ್ದರು. ರಫೇಲ್, ರಾಮ ಮಂದಿರ, ಮಹಾಘಟಬಂಧನ್‌, ಸಾಲಮನ್ನಾ, ತ್ರಿವಳಿ ತಲಾಖ್, ಶಬರಿಮಲೆ ಇನ್ನೂ ಹಲವು ವಿಷಯಗಳ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ದರು.

Rahul Gandhi criticize Narendra Modis interview

ಸ್ಮಿತಾ ಪ್ರಕಾಶ್ ಮಾಡಿದ ಸಂದರ್ಶನದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಬಹು ಸೌಮ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಕೇವಲ ಪ್ರಶ್ನೆಗಳನ್ನು ಮುಟ್ಟಿ ಮುಂದೆ ನಡೆದಿದ್ದಾರೆ, ಕ್ರಾಸ್ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ಬೇಕೆಂದೇ ತಪ್ಪಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಸಹ ಸ್ಮಿತಾ ಪ್ರಕಾಶ್ ಅವರ ಸಂದರ್ಶನವನ್ನು ಟೀಕಸಿದ್ದು, ಪ್ರಶ್ನೆ ಕೇಳಿ ಅವರೇ ಉತ್ತರಗಳ ಬಗ್ಗೆ ಸಳಿವು ನೀಡುತ್ತಿದ್ದರು ಎಂದಿದ್ದಾರೆ. ಮೋದಿ ಅವರು ಸಂದರ್ಶನದ ಸಮಯದಲ್ಲಿ ಬಹಳ ಹೆದರಿದಂತೆ ಕಾಣುತ್ತಿದ್ದರು ಎಂದು ಸಹ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+