ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ ಇದು
ನವದೆಹಲಿ,
ಮೇ 27: ಕೇಂದ್ರದಲ್ಲಿ ಆಡಳಿತ ಬದಲಾವಣೆಯ ಗಾಳಿ ಜೋರಾಗಿಯೇ ಬೀಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಜಾರಿಗೆ ತಂದಿದ್ದ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾರನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗೆ ಒಳಪಡಿಸಬಾರದು ಎಂಬ ವಿಶೇಷ ನಿಯಮವನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ. id="toptextpromo"> id='are-slot-1' class='oiad oi-axt oiadv'>ಈ
ಮಧ್ಯೆ, ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ ಏನು ಎಂದು ನೋಡಿದಾಗ ಕಾಂಗ್ರೆಸ್ ಆಡಳಿತವಿದ್ದಾಗ ರಾಬರ್ಟ್ ವಾದ್ರಾ ಅವರು ಒಬ್ಬ ಡೆವಲಪರ್ ಆಗಿ ಗುರುತಿಸಿಕೊಂಡಿದ್ದವರು. (ವಾದ್ರಾಗೂ ಇನ್ನು ಸಾಮಾನ್ಯರಂತೆ ಭದ್ರತಾ ತಪಾಸಣೆ)id='are-slot-2' class='oiad oi-axt oiadv'>

ರಾಬರ್ಟ್ ವಾದ್ರಾ ಮೂಲತಃ ಪಾಕ್ ಸಿಯಾಲ್ ಕೋಟದವರು
ರಾಜೇಂದ್ರ ಮತ್ತು ಮೌರೀನ್ ವಾದ್ರಾ ಅವರ ಪುತ್ರ. 1969ರ ಮೇ 18ರಂದು ಜನನ. ರಾಜೇಂದ್ರ ವಾದ್ರಾ ಉತ್ತರಪ್ರದೇಶ ಮೂಲದವರು. ತಾಯಿ ಮೌರೀನ್ ಸ್ಕಾಟ್ಲೆಂಡಿನವರು. ಮೊರಾದಾಬಾದಿನ ರಾಜೇಂದ್ರ ಅವರು ಬಿದಿರು ಕಲೆಗಳ ವ್ಯಾಪಾರದಲ್ಲಿ ತೊಡಗಿದ್ದವರು. ಮೂಲತಃ ರಾಜೇಂದ್ರ ಕುಟುಂಬವು ಪಾಕಿಸ್ತಾನದ ಸಿಯಾಲ್ ಕೋಟದಿಂದ ಬಂದವರು. ದೇಶ ಇಬ್ಭಾಗವಾದಾಗ ರಾಜೇಂದ್ರರ ತಂದೆ ಭಾರತಕ್ಕೆ ಬಂದವರು.

ರಾಬರ್ಟ್ ವಾದ್ರಾ ವ್ಯಾಸಂಗ 10ನೇ ತರಗತಿವರೆಗೂ
ರಾಬರ್ಟ್ ವಾದ್ರಾ 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಾರೆ. ರಾಬರ್ಟ್ ವಾದ್ರಾ 13ನೇ ವಯಸ್ಸಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. 1997ರಲ್ಲಿ ಇಬ್ಬರೂ ವಿವಾಹವಾದರು. ದಂಪತಿಗೆ ಒಬ್ಬ ಪುತ್ರ (ರಿಹಾನ್) ಮತ್ತು ಪುತ್ರಿ ಮಿರಯಾ ಇದ್ದಾರೆ.

ರಾಬರ್ಟ್, ಪ್ರಿಯಾಂಕಾ ಮದ್ವೆ ತಂದೆ ರಾಜೇಂದ್ರಗೆ ಇಷ್ಟವಿರಲಿಲ್ಲ
ಗಮನಾರ್ಹವೆಂದರೆ ತಮ್ಮ ಮಗ ರಾಬರ್ಟ್, ಪ್ರಿಯಾಂಕಾ ಗಾಂಧಿಯನ್ನು ವರಿಸುವುದು ತಂದೆ ರಾಜೇಂದ್ರಗೆ ಸುತರಾಂ ಇಷ್ಟವಿರಲಿಲ್ಲ. ಹಾಗಾಗಿ ಮಗನನ್ನು ಕುಟುಂಬದಿಂದ ದೂರವಿಟ್ಟಿದ್ದರು. 2001ರಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ್ದ ರಾಬರ್ಟ್, ತನ್ನ ತಂದೆ ರಾಜೇಂದ್ರ ಮತ್ತು ಸೋದರ ರಿಚರ್ಡ್ ಅವರುಗಳು ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಎಚ್ಚರಿಕೆ ನೀಡಿದ್ದರು. ಮುಂದೆ ರಾಜೇಂದ್ರ, ತಮ್ಮ ಪುತ್ರನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.

ರಾಬರ್ಟ್ ವಾದ್ರಾ ಕುಟುಂಬದಲ್ಲಿ ಸರಣಿ ಸಾವುಗಳು
ಮುಂದೆ ಕಹಿ ಬೆಳವಣಿಗೆಯೊಂದರಲ್ಲಿ 2009ರಲ್ಲಿ ನವದೆಹಲಿಯ ಯೂಸುಫ್ ಸರಾಯ್ ಪ್ರದೇಶದಲ್ಲಿರುವ ಗೆಸ್ಟ್ ಹೌಸ್ ಒಂದರಲ್ಲಿ ರಾಬರ್ಟ್ ವಾದ್ರಾ ತಂದೆ ರಾಜೇಂದ್ರ ಅವರು ಸತ್ತುಬಿದ್ದಿದ್ದರು. ಮುಂದೆ 2003ರಲ್ಲಿ ರಾಬರ್ಟ್ ವಾದ್ರಾ ಅಣ್ಣ ರಿಚರ್ಡ್ ಆತ್ಮಹತ್ಯೆ ಮಾಡಿಕೊಂಡು ಇಹಲೋಕದ ವ್ಯಾಪಾರ ಮುಗಿಸಿದ್ದರು. ಮುಂದೆ ರಾಬರ್ಟ್ ವಾದ್ರಾ ಕುಟುಂಬದಲ್ಲಿ ಮತ್ತೂ ಒಂದು ದುರಂತ ಸಂಭವಿಸಿತು. ಸೋದರಿ ಮಿಷೆಲ್ 2001ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟರು.












Click it and Unblock the Notifications