ಟ್ವಿಟ್ಟರ್ ಲೋಕಕ್ಕೆ ಪ್ರಣಬ್ ಮುಖರ್ಜಿಗೆ ಸ್ವಾಗತ
ನವದೆಹಲಿ, ಜು.1: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಟ್ವಿಟ್ಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷದ ಬಳಿಕ @RashtrapatiBhvn ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ಆರಂಭಿಸಿದ್ದಾರೆ.
ಈಗಾಗಲೇ ಫೇಸ್‌ಬುಕ್‌ನಲ್ಲಿ(President of India) ಹೆಸರಿನಲ್ಲಿ ರಾಷ್ಟ್ರಪತಿಯವರ ಪೇಜ್ ಇದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ರಾಷ್ಟ್ರಪತಿ ಭವನದ ಅಧಿಕಾರಿಗಳು ಈ ಖಾತೆಯನ್ನು ನಿಯಂತ್ರಿಸಲಿದ್ದು ಇದುವರೆಗೂ ಎಂಟು ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ.[ಟ್ವಿಟ್ಟರ್ ಲೋಕ- ಮೋದಿ ನಾಗಾಲೋಟ: 6 ರಿಂದ 4ಕ್ಕೆ ಜಿಗಿತ]
ಈ ಮೂಲಕ ಟ್ವಿಟ್ಟರ್‌ನಲ್ಲಿ ಖಾತೆ ಆರಂಭಿಸಿದ ಮೊದಲ ಭಾರತದ ರಾಷ್ಟ್ರಪತಿ ಎಂಬ ಪಟ್ಟ ಪ್ರಣಬ್ ಮುಖರ್ಜಿಯವರಿಗೆ ಒಲಿದಿದೆ. ಸಾಮಾನ್ಯ ಜನರಿಗೆ ರಾಷ್ಟ್ರಪತಿ ಭವನದ ಮಾಹಿತಿಗಳು ತಿಳಿಯುವಂತಾಗಲು ರಾಷ್ಟ್ರಪತಿಯವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರಪತಿಯವರು ಟ್ವಿಟ್ಟರ್‌ನಲ್ಲಿ ಖಾತೆ ತೆರೆದದ್ದಕ್ಕೆ ಟ್ವಿಟರ್ ಇಂಡಿಯಾ ಸ್ವಾಗತಿಸಿದೆ.
Rashtrapati Bhavan is now on Twitter. Please follow us for regular updates.
— President of India (@RashtrapatiBhvn) July 1, 2014 Honoured to welcome President of India Shri Pranab Mukherjee @RashtrapatiBhvn to Twitter.
— Twitter India (@TwitterIndia) July 1, 2014 











Click it and Unblock the Notifications