PNB ಹಗರಣ: ನೀರವ್ ಮೋದಿಗೆ ಸೇರಿದ ನೂರಾರು ಕೋಟಿ ರೂ. ಆಸ್ತಿ ಜಪ್ತಿ
ನವದೆಹಲಿ, ಅಕ್ಟೋಬರ್ 01: ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಬಹುಕೋಟಿ ವಂಚನೆ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ನೀರವ್ ಮೋದಿಗೆ ಸೇರಿದ ಸುಮಾರು 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿಗೊಳಿಸಿದ್ದು, ಭಾರತ ಮಾತ್ರವಲ್ಲದೆ 5 ದೇಶಗಳಲ್ಲಿರುವ ನೀರವ್ ಮೋದಿ ಅವರ ಆಸ್ತಿಯನ್ನು ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸುಮಾರು 13,000 ಕೋಟಿ ರೂ. ಚಂಚನೆ ಪ್ರಕರಣವನ್ನು ನೀರವ್ ಮೋದಿ ಎದುರಿಸುತ್ತಿದ್ದು, ಅವರ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ಅನ್ನು ಸಹ ಜಾರಿಗೊಳಿಸಿತ್ತು.

ನೀರವ್ ಮೋದಿ ಇಂಗ್ಲೆಂಡ್ ನಲ್ಲೇ ಇದ್ದಾರೆಂಬ ಮಾಹಿತಿ ಇತ್ತೀಚೆಗೆ ಲಭ್ಯವಾಗಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.
ಇದೀಗ ನೀರವ್ ಮೋದಿ ಅವರಿಗೆ ಸೇರಿದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದು, ಖಾತೆಯಲ್ಲಿದ್ದ ಒಟ್ಟು 278 ಕೋಟಿ ರೂ. ಮತ್ತು ಸುಮಾರು 22.69 ಕೋಟಿ ಮೌಲ್ಯದ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ.












Click it and Unblock the Notifications