ಈದ್ ಮುಬಾರಕ್ ಎಂದು ಶುಭ ಕೋರಿದ ಮೋದಿ
ನವ ದೆಹಲಿ, ಮೇ 25: ರಂಜಾನ್ ಹಬ್ಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮುಸ್ಲಿಮರಿಗೆ ಶುಭ ಹಾರೈಸಿದ್ದಾರೆ.
''ಈದ್-ಉಲ್-ಫಿತರ್ ಶುಭಾಶಯಗಳು. ಈ ವಿಶೇಷ ಸಂದರ್ಭವು ಸಹಾನುಭೂತಿ, ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಎಲ್ಲರೂ ಆರೋಗ್ಯವಂತರು ಮತ್ತು ಸಮೃದ್ಧರಾಗಿರಲಿ'' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ದೇಶದ ಜನತೆಯ ನಡುವೆ ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಮೋದಿ ಹಾರೈಸಿದ್ದು, ಆರೋಗ್ಯ ಮತ್ತು ಸಮೃದ್ಧಿಗೆ ಪ್ರಾರ್ಥನೆ ಮಾಡಿದ್ದಾರೆ.
Eid Mubarak!
— Narendra Modi (@narendramodi) May 25, 2020
Greetings on Eid-ul-Fitr. May this special occasion further the spirit of compassion, brotherhood and harmony. May everyone be healthy and prosperous.
ಈ ವರ್ಷದ ರಂಜಾನ್ ಆಚರಣೆ ಮನೆಯಲ್ಲಿಯೇ ಮಾಡಲು ತಿಳಿಸಲಾಗಿದೆ. ಕೊರೊನಾ ವೈರಸ್ ಭೀತಿಯ ನಡುವೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಈದ್ ಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ನಿಮ್ಮೆಲ್ಲರಿಗೂ ಈದ್ ಮುಬಾರಕ್ ಎಂದಿದ್ದಾರೆ.












Click it and Unblock the Notifications