ಮಾಜಿ ಪ್ರಧಾನಿ ಗೌಡರಿಗೆ ಹಾಲಿ ಪ್ರಧಾನಿ ಮೋದಿ ಶುಭಹಾರೈಕೆ
ನವದೆಹಲಿ, ಮೇ 18: ಇಂದು ತಮ್ಮ 86 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ತಿಳಿಸಿರುವ ಮೋದಿ, "ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೊಂದಿಗೆ ಮಾತನಾಡಿ ಅವರಿಗೆ ಜನ್ಮದಿನದ ಶುಭಕೋರಿದ್ದೇನೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ತಿರುಪತಿ ವೆಂಕಟರಮನ ಸನ್ನಿಧಿಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರೂ, ದೇವೇಗೌಡರಿಗೆ ರಾಜ್ಯ ರಾಜಕಾರಣದಲ್ಲಾಗುತ್ತಿರುವ ತಲ್ಲಣ ಮನಸ್ಸಿಗೆ ನೆಮ್ಮದಿ ನೀಡಿದಂತಿಲ್ಲ. ಆದ್ದರಿಂದಲೇ ತಿರುಪತಿಯಲ್ಲಿ ಅವರು ವಿಶೇಷ ಪೂಜೆ, ಹೋಮ, ಹವನ ನಡೆಸಲಿದ್ದಾರೆ.
ಅದೇನೇ ಇದ್ದಿರಲಿ, ಇಳಿ ವಯಸ್ಸಿನಲ್ಲೂ ಹುರುಪಿನಿಂದ ಓಡಾಡುವ, ನೆಲ, ಜಲ, ಭಾಷೆ ಎಂದೊಡನೆ ವಯಸ್ಸು ಮರೆತು ಹೋರಾಟಕ್ಕೆ ನಿಲ್ಲುವ ದೇವೇಗೌಡರಿಗೆ ದೇಶದಾದ್ಯಂತ ಹಲವು ಮಹನೀಯರು ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.
|
ಶುಭಾಶಯ ಕೋರಿದ ಮೋದಿ
"ನಮ್ಮ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೊಂದಿಗೆ ಮಾತನಾಡಿ ಅವರಿಗೆ ಜನ್ಮದಿನದ ಶುಭಕೋರಿದ್ದೇನೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪ್ರಧಾನಿ ನರೇಂದ್ರ ಮೋಓದಿ ಟ್ವೀಟ್ ಮಾಡಿದ್ದಾರೆ.
|
ದೀದಿಯಿಂದ ಶುಭಹಾರೈಕೆ
ಎಚ್ ಡಿ ದೇವೇಗೌಡರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
|
ತ್ರಿಪುರ ಸಿಎಂ ಟ್ವೀಟ್
"ಮಾಜಿ ಪ್ರಧಾನಿ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ನಾನು ಆ ದೇವರಲ್ಲಿ ಬೇಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ ತ್ರಿಪುರ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್.
|
ಅವರೊಬ್ಬ ಮುತ್ಸದ್ದಿ ರಾಜಕಾರಣಿ
ಪೇಯ್ಡ್ ಮಾಧ್ಯಮಗಳು ಎಚ್ ಡಿ ದೇವೇಗೌಡರನ್ನು ತಪ್ಪಾಗಿ ಪ್ರಚುರಪಡಿಸುತ್ತಿವೆ. ಆದರೆ ಅವರೊಬ್ಬ ಅತ್ಯುತ್ತಮ ಮತ್ತು ಮುತ್ಸದ್ದಿ ರಾಜಕಾರಣಿ. ಹುಟ್ಟು ಹಬ್ಬದ ಶುಭಾಶಯಗಳು ದೇವೇಗೌಡ್ರೇ ಎಂದು ಶುಭ ಹಾರೈಸಿದ್ದಾರೆ ಕೃಪಾಚರ್ಯ ಎಂಬುವವರು.












Click it and Unblock the Notifications