ಮೊದಲ ಬಾರಿ ದೆಹಲಿ ಮೆಟ್ರೋ ಏರಿದ ಪ್ರಧಾನಿ ಮೋದಿ
ನವದೆಹಲಿ, ಏ. 25 : ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೊದಲ ಬಾರಿಗೆ ದೆಹಲಿಯ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮೆಟ್ರೋ ಪ್ರಯಾಣದ ಬಳಿಕ ಟ್ವೀಟ್ ಮಾಡಿರುವ ಅವರು ಮೆಟ್ರೋ ಪ್ರಯಾಣವನ್ನು ಆನಂದಿಸಿದೆ ಎಂದು ಹೇಳಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ರಾಷ್ಟ್ರೀಯ ಗುಪ್ತಚರ ಅಕಾಡೆಮಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನರೇಂದ್ರ ಮೋದಿ ಅವರು, ದೌಲಾಕೌನ್ನಿಂದ ದ್ವಾರಕಾವರೆಗೆ ಮೆಟ್ರೋದಲ್ಲಿ ಸಂಚರಿಸಿದರು. ಈ ಮಾರ್ಗದಲ್ಲಿ ರಸ್ತೆ ಮೂಲಕ ಹೋದರೆ ಭದ್ರತೆ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಪ್ರಧಾನಿ ಮೆಟ್ರೋ ಏರಿದ್ದರು. [ಪೆಟ್ರೋಲಿಯಂ ಸಚಿವರ ಮೆಟ್ರೋ ಸವಾರಿ!]

ಮೋದಿ ಟ್ವಿಟ್ : 'ದೆಹಲಿಯ ಮೆಟ್ರೋದಲ್ಲಿ ಪ್ರಯಾಣಿಸುವಂತೆ ಶ್ರೀಧರನ್ ಅವರು ಹಲವು ಸಲ ಹೇಳಿದ್ದರು. ಇಂದು ದ್ವಾರಕಾಗೆ ತೆರಳುವಾಗ ಅವಕಾಶ ದೊರೆಕಿತು ಈ ಸಂಚಾರವನ್ನು ಆನಂದಿಸಿದೆ' ಎಂದು ಟ್ವಿಟ್ ಮಾಡಿರುವ ಮೋದಿ, ದೆಹಲಿ ಮೆಟ್ರೋ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳನ್ನು ಎಂದು ತಿಳಿಸಿದ್ದಾರೆ. [ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ಸಂಚಾರ ಮೇ 1ರಿಂದ]

ದೆಹಲಿಯ ಮೆಟ್ರೋ ಯೋಜನೆಯ ರೂವಾರಿ ಇ. ಶ್ರೀಧರನ್ ಅವರು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ನ ಮಾಜಿ ಮುಖ್ಯಸ್ಥರು. 'ಮೆಟ್ರೋ ಮ್ಯಾನ್' ಎಂದೇ ಅವರು ಪ್ರಸಿದ್ಧಿಪಡೆದಿದ್ದಾರೆ.
Sreedharan ji would always tell me to experience the Delhi Metro. Today I had the opportunity to do so on the way to Dwarka.
— Narendra Modi (@narendramodi) April 25, 2015 

Click it and Unblock the Notifications
