• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಧಾನಿ ಪ್ರಯಾಣಕ್ಕೆ 8,500 ಕೋಟಿ ರೂಪಾಯಿಯ ವಿಮಾನಗಳು: ಏನಿದರ ವಿಶೇಷತೆ?

|
Google Oneindia Kannada News

ನವದೆಹಲಿ, ಆಗಸ್ಟ್‌ 15: ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಅತ್ಯಾಧುನಿಕ ಏರ್‌ ಇಂಡಿಯಾ ಒನ್ ಬೋಯಿಂಗ್ 777-300ER ವಿಮಾನದಲ್ಲಿ ಪ್ರಯಾಣಿಸಲಿದ್ದು, ಶೀಘ್ರದಲ್ಲೇ ಭಾರತಕ್ಕೆ ತಲುಪಲಿದೆ.

ಅತ್ಯಾಧುನಿಕ ಟೆಕ್ನಾಲಜಿ ಜೊತೆಗೆ ಸತತ 17 ಗಂಟೆಗಳು ನೆಲಕ್ಕಿಳಿಯದೇ ಹಾರಾಡುವ ಸಾಮರ್ಥ್ಯ ಹೊಂದಿರುವ ಏರ್​ ಇಂಡಿಯಾ ಒನ್​ ಬೋಯಿಂಗ್ 777-300ER ಒಟ್ಟು ಎರಡು ವಿಮಾನಗಳು ಭಾರತಕ್ಕೆ ಬರಲಿದೆ. ಇದರಲ್ಲಿ ಒಂದು ವಿಮಾನವನ್ನು ಪ್ರಧಾನಿ ನರೇಂದ್ರ ಮೋದಿಗೆ ಬಳಕೆಯಾಗಲಿದ್ದು, ಮತ್ತೊಂದು ವಿಮಾನ ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಇತರೆ ಹಿರಿಯ ಗಣ್ಯರ ಬಳಕೆಗೆ ಲಭ್ಯವಾಗಲಿದೆ.

ಗೋಏರ್‌ನಿಂದ ಪ್ರಯಾಣಿಕರಿಗೆ ವಿಶೇಷ ಬುಕ್ಕಿಂಗ್ ಸೌಲಭ್ಯ: GoFlyPrivate ಮೂಲಕ ಅನೇಕ ಸಾಲುಗಳನ್ನು ನಿರ್ಬಂಧಿಸಬಹುದುಗೋಏರ್‌ನಿಂದ ಪ್ರಯಾಣಿಕರಿಗೆ ವಿಶೇಷ ಬುಕ್ಕಿಂಗ್ ಸೌಲಭ್ಯ: GoFlyPrivate ಮೂಲಕ ಅನೇಕ ಸಾಲುಗಳನ್ನು ನಿರ್ಬಂಧಿಸಬಹುದು

ಅಮೆರಿಕಾದಲ್ಲಿ ತಯಾರಾದ ವಿಶೇಷ ವಿಮಾನಗಳು

ಅಮೆರಿಕಾದಲ್ಲಿ ತಯಾರಾದ ವಿಶೇಷ ವಿಮಾನಗಳು

ಹೌದು ಈ ವಿಶೇಷ ಬೋಯಿಂಗ್ 777 ವಿಮಾನಗಳು ಅಮೆರಿಕಾದಲ್ಲಿ ತಯಾರಾಗಿವೆ. ಈಗಾಗಲೇ ಸ್ಪೆಷಲ್​ ಎಕ್ಸ್ಟ್ರಾ ಸೆಕ್ಷನ್ ಫ್ಲೈಟ್​(ಎಸ್​ಇಎಸ್​ಎಫ್​) ಅಥವಾ ವಿವಿಐಪಿ ಏರ್​ಕ್ರಾಫ್ಟ್​ ‘ಏರ್​ ಇಂಡಿಯಾ ಒನ್​' ವಿಮಾನಗಳನ್ನು ಸ್ವೀಕರಿಸುವುದಕ್ಕಾಗಿ ಏರ್​ ಇಂಡಿಯಾ ಮತ್ತು ವಿವಿಐಪಿ ಸೆಕ್ಯುರಿಟಿ, ಸರ್ಕಾರದ ಉನ್ನತ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದಾರೆ.

ಅಮೆರಿಕದಲ್ಲಿ ಬೋಯಿಂಗ್ 777 ವಿಮಾನವನ್ನು ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ಪೂರೈಸಲಾಗುತ್ತದೆ. ಹೊಸ ಬೋಯಿಂಗ್ 777-300ER ವಿಮಾನಗಳು ಏರ್​ ಇಂಡಿಯಾದ ಬೋಯಿಂಗ್ 747ರ ಸ್ಥಾನವನ್ನು ತುಂಬಲಿವೆ.

ವಾಯುಪಡೆಯ ಪೈಲಟ್‌ಗಳೇ ಪ್ರಧಾನಿಗೆ ಸಾಥ್ ಕೊಡಲಿದ್ದಾರೆ

ವಾಯುಪಡೆಯ ಪೈಲಟ್‌ಗಳೇ ಪ್ರಧಾನಿಗೆ ಸಾಥ್ ಕೊಡಲಿದ್ದಾರೆ

ಪ್ರಧಾನಿ ತೆರಳವು ವಿಮಾನವನ್ನು ಅತ್ಯಂತ ನುರಿತ ಪೈಲಟ್‌ಗಳು ಇಲ್ಲಿಯವರೆಗೆ ಚಲಾಯಿಸಿರುವುದು ನಾವು ನೋಡಿದ್ದೇವೆ. ಆದರೆ ಏರ್​ ಇಂಡಿಯಾ ಒನ್ ವಿಮಾನಕ್ಕೆ ಭಾರತೀಯ ವಾಯುಪಡೆಯ ಪೈಲಟ್​ಗಳೇ ಪೈಲಟ್​ಗಳಾಗಿ ಇರಲಿದ್ದಾರೆ. ಈಗಿರುವಂತೆ ಏರ್ ಇಂಡಿಯಾದ ಪೈಲಟ್​ಗಳು ಇನ್ನು ಮೇಲೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರೆ ಹಿರಿಯ ಗಣ್ಯರ ವಿಮಾನದ ಪೈಲಟ್ ಆಗಿರಲಾರರು.

ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಐಡಿ: ಮೋದಿ ಘೋಷಣೆಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಐಡಿ: ಮೋದಿ ಘೋಷಣೆ

ಬೋಯಿಂಗ್ 777 ವಿಮಾನಕ್ಕೆ ಬರೋಬ್ಬರಿ 8,458 ಕೋಟಿ ರೂಪಾಯಿ

ಬೋಯಿಂಗ್ 777 ವಿಮಾನಕ್ಕೆ ಬರೋಬ್ಬರಿ 8,458 ಕೋಟಿ ರೂಪಾಯಿ

ಈ ಹೊಸ ವಿಮಾನಗಳ ವೆಚ್ಚ 8,458 ಕೋಟಿ ರೂಪಾಯಿ ಆಗಿದೆ. ಹೊಸ ವಿಮಾನ ಭದ್ರ ಕೋಟೆಯಾಗಿರಲಿದ್ದು, ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಇಂತಹ ವಿಮಾನವನ್ನು ಸದ್ಯ ಅಮೆರಿಕ ಅಧ್ಯಕ್ಷರು ಮಾತ್ರ ಬಳಸುತ್ತಿದ್ದಾರೆ.

17 ಗಂಟೆಗಳ ನಿರಂತರ ಪ್ರಯಾಣದ ಸಾಮರ್ಥ್ಯ

17 ಗಂಟೆಗಳ ನಿರಂತರ ಪ್ರಯಾಣದ ಸಾಮರ್ಥ್ಯ

ಈ ಹೊಸ ವಿಮಾನವು ಇಂಧನ ತುಂಬಲು ನಡುವೆ ಇಳಿಯದೆ ಸತತ 17 ಗಂಟೆಗಳ ಕಾಲ ನಿರಂತರವಾಗಿ ಹಾರಾಟ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ವಿಮಾನದಲ್ಲಿ ಅಳವಡಿಸಲಾಗಿರುವ ಸುಧಾರಿತ ಸಂವಹನ ವ್ಯವಸ್ಥೆಯಿಂದಾಗಿ, ಪ್ರಧಾನಿ ಅಥವಾ ರಾಷ್ಟ್ರಪತಿಗಳು ಯಾವುದೇ ಟ್ರ್ಯಾಪ್ ಇಲ್ಲದೆಯೇ ವಿಡಿಯೋ ಅಥವಾ ಆಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಬಂಧಿತ ನೆಲದ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ.

English summary
India is all set to receive its new Plane (Air India One) Boeing 777-300ERs which will be used to fly VVIPs including Prime minister, President, and Vice- President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X