ನನ್ನ ಕರೆಗೂ ಪ್ರತಿಕ್ರಿಯಿಸದ ದೀದಿಯದು ದುರಹಂಕಾರ: ಮೋದಿ

Recommended Video

      ಜನರ ರಕ್ಷಣೆಯ ವಿಚಾರದಲ್ಲೂ ರಾಜಕೀಯ..!? | Oneindia Kannada

      ನವದೆಹಲಿ, ಮೇ 06: ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ಫೋನಿಯಿಂದಾದ ಹಾನಿಯ ಕುರಿತು ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಕರೆಯನ್ನು ಸ್ವೀಕರಿಸದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಮೋದಿ ಟೀಕಿಸಿದ್ದಾರೆ.

      "ಪಶ್ಚಿಮ ಬಂಗಾಳದ ಜನರ ಕ್ಷೇಮ ಸಮಾಚಾರ ವಿಚಾರಿಸಲು ಕರೆ ಮಾಡಿದ ನನ್ನ ಕರೆಯನ್ನು ಸ್ವೀಕರಿಸದ ದೀದಿಯದು ದುರಹಂಕಾರದ ಪ್ರವೃತ್ತಿ" ಎಂದು ಮೋದಿ ಹೇಳಿದ್ದಾರೆ.

      "ನಾನು ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ನಿಂದ ಉಂಟಾದ ಹಾನಿಯ ಬಗ್ಗೆ ಮಾತನಾಡಲು ಮಮತಾ ಬ್ಯಾನರ್ಜಿ ಅವರಿಗೆ ಫೋನ್ ಮಾಡಿದ್ದೆ. ಆದರೆ ಸೈಕ್ಲೋನ್ ನಿಂದಾಗಿ ಇಡೀ ರಾಜ್ಯ ತತ್ತರಿಸಿರುವಾಗ ಅವರು ರಾಜಕೀಯ ಲೆಕ್ಕಾಚಾರ ಮಾಡುತ್ತಿದ್ದಾರೆ" ಎಂದು ಮೋದಿ ಹೇಳಿದರು.

      PM Modi on Mamata Banerjee not responding to his call says, an arrogant behavior

      "ಸ್ಪೀಡ್ ಬ್ರೇಕರ್ ದೀದಿ ಅವರು ಸೈಕ್ಲೋನ್ ಫೋನಿಯಲ್ಲೂ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನಾನು ಫೋನ್ ಮಾಡಿದ್ದರೂ ಸ್ವೀಕರಿಸದೆ ದುರಂಹಕಾರ ತೋರಿಸಿದ್ದಾರೆ. ನಾಣು ಅವರ ಕರೆಗಾಗಿ ನಂತರವೂ ಕಾದಿದ್ದೇನೆ. ಆದರೆ ಅವರು ಕರೆ ಮಾಡಲಿಲ್ಲ. ಆದರೂ ನಾನು ಮತ್ತೊಮ್ಮೆ ಅವರಿಗೆ ಫೋನ್ ಮಾಡಿದೆ. ಆದರೂ ಅವರು ಹಿಂತಿರುಗಿ ಕರೆ ಮಾಡಲಿಲ್ಲ. ನನಗೆ ಪಶ್ಚಿಮ ಬಂಗಾಳದ ಜನರ ಸುರಕ್ಷತೆಯ ಬಗ್ಗೆ ಆತಂಕವಿದೆ" ಎಂದು ಮೋದಿ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+