ನೇಣು ಬಿಗಿದು ಐಐಟಿ ದೆಹಲಿಯ ವಿದ್ಯಾರ್ಥಿನಿ ಆತ್ಮಹತ್ಯೆ
ನವದೆಹಲಿ, ಮೇ 31: ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಐಐಟಿ) ಆವರಣದಲ್ಲಿ ಅಂತಿಮ ವರ್ಷದ ಪಿಎಚ್ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
27 ವರ್ಷದ ಮಂಜುಳಾ ದೆವಾಕ್ ತನ್ನ ಕೋಣೆಯ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಐಟಿ ಬ್ಲಾಕಿನಲ್ಲಿರುವ ನಳಂದಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ಸಂಜೆ 7.40 ನಿಮಿಷ ಸುಮಾರಿಗೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಗಿ ಪೊಲೀಸ್ ಅಧಿಕಾರಿ ಚಿನ್ಮೊಯ್ ಬಿಸ್ವಾಸ್ ಹೇಳಿದ್ದಾರೆ.

ಮಂಜುಳಾರನ್ನು ರಿತೇಶ್ ವಿರ್ಹಾ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ರಿತೇಶ್ ಮನೆಯವರೆಲ್ಲಾ ಭೋಪಾಲ್ ನಲ್ಲಿ ವಾಸವಾಗಿದ್ದಾರೆ. ಮಂಜುಳಾ ಐಐಟಿಯಲ್ಲಿ ಜಲ ಸಂಪನ್ಮೂಲಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು.
ಮಂಜುಳಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣ ಏನು ಎಂಬ ಅಂಶ ಹೊರ ಬೀಳಲಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್ ನೋಟ್ ಸಿಕ್ಕಿದ್ದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications