ಎರಡು ದಿನಗಳ ಬಳಿಕ ಪೆಟ್ರೋಲ್ ದರ 21 ಪೈಸೆ ಇಳಿಕೆ

ನವದೆಹಲಿ, ನವೆಂಬರ್ 8: ಎರಡು ದಿನಗಳ ಬಳಿಕ ಪೆಟ್ರೋಲ್ ದರ 21 ಪೈಸೆ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಕ್ರಮೇಣವಾಗಿ ಪೆಟ್ರೋಲ್ ದರ ಕಡಿಮೆಯಾಗುತ್ತಿತ್ತು ಆದರೆ ಕಳೆದ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ ದರ ನವೆಂಬರ್ 8ರಂದು 21 ಪೈಸೆ ಇಳಿಕೆಯಾಗಿದೆ.

ದೀಪಾವಳಿ ವಿಶೇಷ ಪುರವಣಿ

ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂ ಆಗಿದೆ. ಅದರಂತೆ ವಾಣಿಜ್ಯ ರಾಜಧಾಇ ಮುಂಬೈನಲ್ಲಿ 20 ಪೈಸೆ ಪೆಟ್ರೋಲ್ ದರ ಕಡಿಮೆಯಾಗಿದ್ದು, ಲೀಟರ್‌ಗೆ 83.72 ರೂ ಆಗಿದೆ. ಇದೇ ಏಳೆ ಡೀಸೆಲ್ ದರ 18 ಪೈಸೆಗಳಷ್ಟು ಕಡಿಮೆಯಾಗಿ 72.89 ರೂ. ಆಗಿದೆ. ಮುಂಬೈನಲ್ಲಿ 7.38 ರೂ ದರ ನಿಗದಿಯಾಗಿದೆ.

Petrol price declines 21 paisa after two days

ಅದರಂತೆ ಕೋಲ್ಕತ್ತಾದಲ್ಲಿ 80.13 ರೂ ಆಗಿದ್ದು, ಡೀಸೆಲ್ ದರ 74.75 ರೂ. ಆಗಿದೆ. ಇನ್ನು ಬೆಂಗಳೂರಲ್ಲಿ ಕಳೆದ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದು, ಪ್ರತಿ ಲೀಟರ್ ಗೆ 79.05 ರೂ ಇದೆ.

ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ

ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆ

ಮುಂಬೈಯನ್ನು ನಾವು ಗಮನಿಸುವುದಾದರೆ ಗುರುವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 20 ಪೈಸೆ ಕಡಿಮೆಯಾಗಿದೆ. 83.72 ರೂ ಪ್ರತಿ ಲೀಟರ್‌ ಪೆಟ್ರೋಲ್ ಗೆ ನೀಡಬೇಕಾಗಿದೆ. ಡೀಸೆಲ್ ಬೆಲೆಯಲ್ಲಿ 18 ಪೈಸೆ ಕಡಿಮೆಯಾಗಿದ್ದು 72.89 ರೂಗೆ ಬಂದು ತಲುಪಿದೆ.

ನವದೆಹಲಿಯಲ್ಲೂ ಕಡಿಮೆ

ನವದೆಹಲಿಯಲ್ಲೂ ಕಡಿಮೆ

ನವದೆಹಲಿಯಲ್ಲಿ ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.21 ಪೈಸೆಯಷ್ಟು ಕಡಿಮೆಯಾಗಿದ್ದು, 78.21ರೂಗೆ ಬಂದು ತಲುಪಿದೆ. ಡೀಸೆಲ್ ಬೆಲೆ 18 ಪೈಸೆ ಇಳಿಕೆಯಾಗಿದ್ದು ದೆಹಲಿಯಲ್ಲಿ ಡೀಸೆಲ್ ಬೆಲೆ 72.89 ರೂ ತಲುಪಿದೆ.

 21 ದಿನಗಳಲ್ಲಿ ಪೆಟ್ರೋಲ್ 4.63 ರೂನಷ್ಟು ಕಡಿಮೆ

21 ದಿನಗಳಲ್ಲಿ ಪೆಟ್ರೋಲ್ 4.63 ರೂನಷ್ಟು ಕಡಿಮೆ

ಪೆಟ್ರೋಲ್ ದರ 21 ದಿನಗಳಲ್ಲಿ 4.63 ರೂ ನಷ್ಟು ಇಳಿಕೆಯಾಗಿದೆ. ಡೀಸೆಲ್ 2.80 ರೂ ನಷ್ಟು ಇಳಿಕೆ ಕಂಡಿದೆ. ಅಮೇರಿಕಾವು ಇರಾನ್‌ನಿಂದ ತೈಲವನ್ನು ಆಮದುಮಾಡಿಕೊಳ್ಳುವ ಕುರಿತು ತೆಗೆದುಕೊಂಡ ನಿರ್ಧಾರದಿಂದ ಚೀನಾ, ಜಪಾನ್ ಸೇರಿ 8 ದೇಶಗಳಲ್ಲಿ ಕರೀದಿ ಕಡಿಮೆಯಾಗಿದೆ ಹಾಗಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿದಿದೆ.

ಬೆಂಗಳೂರಲ್ಲಿ ಪೆಟ್ರೋಲ್ ದರ

ಬೆಂಗಳೂರಲ್ಲಿ ಪೆಟ್ರೋಲ್ ದರ

ಬೆಂಗಳೂರಲ್ಲಿ ಇಂದಿನ ಪೆಟ್ರೋಲ್ ದರ 79.05 ರೂಗಳಿವೆ. ಕಳೆದ ಎರಡು ದಿನಗಳಿಂದ ಬೆಂಗಳೂರಲ್ಲಿ ಪೆಟ್ರೋಲ್ ದರ ಕಡಿಮೆಯಾಗಿಲ್ಲ. ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+