ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಸೇನಾ ಪಡೆ ನೇಮಕಾತಿಗಾಗಿ ಆಗ್ರಹಿಸಿ ದೆಹಲಿಗೆ ಯುವಕರ ಪ್ರತಿಭಟನಾ ಮೆರವಣಿಗೆ

|
Google Oneindia Kannada News

ನವದೆಹಲಿ,ಜುಲೈ.16: ನೇಮಕಾತಿಗೆ ಒತ್ತಾಯಿಸಿ ನೂರಾರು ಅರೆಸೇನಾ ಪಡೆ ಆಕಾಂಕ್ಷಿಗಳು ಶುಕ್ರವಾರ ದೆಹಲಿಗೆ ತೆರಳುವ ಮಾರ್ಗದಲ್ಲಿ ಆಗ್ರಾಕ್ಕೆ ಆಗಮಿಸಿದ್ದಾರೆ. ಆಕಾಂಕ್ಷಿಗಳು ಮಹಾರಾಷ್ಟ್ರದ ನಾಗ್ಪುರದಿಂದ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದು, ಜುಲೈ 25 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಅರೆಸೇನಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಉದ್ಯೋಗ ಆಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ.

ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಅರೆಸೇನಾ ಪಡೆ ಆಕಾಂಕ್ಷಿಗಳ ದಂಡು ತಮ್ಮ ಪ್ರಯಾಣದ 44ನೇ ದಿನದಂದು ಬೆಳಗ್ಗೆ 7.30ಕ್ಕೆ 'ಸರ್ಕಾರ್ ವರ್ದಿ ದೇ ಯಾ ಅರ್ಥಿ' ಎಂದು ಕೂಗುತ್ತಾ ಆಗ್ರಾಕ್ಕೆ ಬಂದಿದ್ದಾರೆ. ಅರೆಸೇನಾ ಪಡೆ ಆಕಾಂಕ್ಷಿಗಳಿಗೆ ಆಗ್ರಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರು ಪುಷ್ಪಗಳ ಸುರಿಮಳೆಗೈದು ಸ್ವಾಗತಿಸಿದರು.

ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಮಿತ್ ಸಿಂಗ್ ಮಾತನಾಡಿ, "ಬಿಜೆಪಿ ನೇತೃತ್ವದ ಸರ್ಕಾರದ ಹಠಮಾರಿ ಧೋರಣೆಯಿಂದ ದೇಶವು ಹಣವೂ ಇಲ್ಲ, ಉದ್ಯೋಗವೂ ಇಲ್ಲ ಎನ್ನುವಷ್ಟು ಅವ್ಯವಸ್ಥೆಗೆ ಸಿಲುಕಿದೆ. ಈ ದೇಶದ ಯುವಕರು ಮೋದಿ ಸರ್ಕಾರದ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ," ಎಂದು ಹೇಳಿದರು.

"ಸರ್ಕಾರ ಖಾಲಿ ಹುದ್ದೆಗಳಿದ್ದರೂ, ಅವರಿಗೆ ತಮ್ಮ ಹುದ್ದೆಗಳನ್ನು ನೀಡಲಾಗಿಲ್ಲ. ಅರೆಸೇನಾ ಪಡೆ ಆಕಾಂಕ್ಷಿಗಳು ನೇಮಕಾತಿ ಪತ್ರ ಪತ್ರಗಳನ್ನು ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅರೆಸೇನಾ ಪಡೆಗಳಲ್ಲಿ ನೇಮಕಾತಿಗಾಗಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯನ್ನು ಸಹ ನೀಡಿದ್ದಾರೆ," ಎಂದು ಅರೆಸೈನಿಕ ಪಡೆ ಆಕಾಂಕ್ಷಿಗಳ ಮೆರವಣಿಗೆಯನ್ನು ಮುನ್ನಡೆಸುತ್ತಿರುವ ವಿಶಾಲ್ ಲಾಂಗ್ಡೆ ತಿಳಿಸಿದ್ದಾರೆ.

"ಈ ಹಿಂದೆ ದೆಹಲಿಯಲ್ಲಿ 72 ದಿನಗಳ ಉಪವಾಸ ಸತ್ಯಾಗ್ರಹದೊಂದಿಗೆ ಒಂದು ವರ್ಷದ ಪ್ರತಿಭಟನೆ ನಡೆಸಿದ್ದೇವೆ. ಆ ಬಳಿಕ ನಾಗ್ಪುರದ ಸಂವಿಧಾನ್ ಚೌಕ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿ, ಇದೀಗ ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದೇವೆ. ಸರ್ಕಾರವು ನಮಗೆ ಉದ್ಯೋಗಗಳನ್ನು ನೀಡದಿದ್ದರೆ ನಮಗೆ ಮರಣವನ್ನಾದರೂ ನೀಡಬೇಕು," ಎಂದು ವಿಶಾಲ್ ಲಾಂಗ್ಡೆ ಹೇಳಿದರು.

 ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ

ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ

ಅರೆಸೇನಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಲಾಗಿದೆ. ಪಾದಯಾತ್ರೆಯ ಆಕಾಂಕ್ಷಿಗಳಲ್ಲಿ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದರೂ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅರೆಸೈನಿಕ ಪಡೆ ಆಕಾಂಕ್ಷಿಗಳ ಮೆರವಣಿಗೆಯನ್ನು ಮುನ್ನಡೆಸುತ್ತಿರುವ ವಿಶಾಲ್ ಲಾಂಗ್ಡೆ ತಿಳಿಸಿದರು.

 ಲಿಖಿತ, ವೈದ್ಯಕೀಯ ಪರೀಕ್ಷೆಗಳೂ ಪೂರ್ಣ

ಲಿಖಿತ, ವೈದ್ಯಕೀಯ ಪರೀಕ್ಷೆಗಳೂ ಪೂರ್ಣ

170 ಯುವಕರು, 30 ಯುವತಿಯರು ಸೇರಿದಂತೆ ಒಟ್ಟು 200 ಜನ ಆಕಾಂಕ್ಷಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಮಹಿಳಾ ಪಡೆಯ ನಾಯಕಿ ರೂಪಾಲಿ ತಿಳಿಸಿದ್ದಾರೆ. ವಿಶಾಲ್ ಮಹ್ತೋ, ಅವರು ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಅವರ ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

 ಗುತ್ತಿಗೆ ಸೈನಿಕರ ಹುದ್ದೆ ಬೇಡ

ಗುತ್ತಿಗೆ ಸೈನಿಕರ ಹುದ್ದೆ ಬೇಡ

ನಮ್ಮ ವಯಸ್ಸಾಗುವವರೆಗೂ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ನಮಗೆ ಶಾಶ್ವತ ಉದ್ಯೋಗಗಳನ್ನು ನೀಡುವ ಬದಲು 'ಅಗ್ನಿವೀರ್ ತರಹದ' ಗುತ್ತಿಗೆ ಸೈನಿಕರನ್ನು ಈ ಹುದ್ದೆಗಳನ್ನು ತುಂಬಲು ಸರ್ಕಾರ ಬಯಸಿದೆ. ನಮಗೆ ಉದ್ಯೋಗ ಸೇರ್ಪಡೆ ಪತ್ರಗಳನ್ನು ವಿಳಂಬಗೊಳಿಸಲು ಸರ್ಕಾರಕ್ಕೆ ಯಾವುದೇ ಕಾರಣವಿಲ್ಲ ಎಂದು ವಿಶಾಲ್ ಮಹ್ತೋ ಹೇಳಿದರು.

 4000 ಹುದ್ದೆಗಳ ನೇಮಕಾತಿ ಬಾಕಿ

4000 ಹುದ್ದೆಗಳ ನೇಮಕಾತಿ ಬಾಕಿ

2018 ರಲ್ಲಿ ಅರೆಸೈನಿಕ ಪಡೆಗಳಲ್ಲಿ 60,120 ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. 55,912 ಅಭ್ಯರ್ಥಿಗಳನ್ನು ನೇಮಿಸಲಾಯಿತು. ಆದರೆ ಇಲ್ಲಿಯವರೆಗೆ, ಉಳಿದ 4000 ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ ಎಂದು ಹಿರಿಯ ಅರೆಸೇನಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Hundreds of paramilitary aspirants arrived in Agra on Friday on their way to Delhi, demanding recruitment. Aspirants are marching from Nagpur in Maharashtra to Delhi and will protest at Jantar Mantar on July 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X