ಭಾರತೀಯ ಮುಸ್ಲಿಮರನ್ನು 'ಪಾಕಿಸ್ತಾನಿ' ಎಂದವರನ್ನು ಶಿಕ್ಷಿಸಿ: ಓವೈಸಿ
ನವದೆಹಲಿ, ಫೆಬ್ರವರಿ 07: "ಭಾರತೀಯ ಮುಸ್ಲಿಮರನ್ನು 'ಪಾಕಿಸ್ತಾನಿ' ಎಂದು ಕರೆಯುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ" ಎನ್ನುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ ಎಐಎಂಐಎಂ( All India Majlis-e-Ittehadul Muslimeen) ನಾಯಕ ಅಸಾದುದ್ದೀನ್ ಓವೈಸಿ.
ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣಕ್ಕೆ ಕೃತಜ್ಞತೆ ಅರ್ಪಿಸಿ ನಡೆದ ಕಾರ್ಯಕ್ರಮದ ನಂತರ ಚರ್ಚೆಯಲ್ಲಿ ಭಾಗವಹಿಸಿದ ಓವೈಸಿ, ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿಗಳು ಎಂದು ಕರೆಯುವವರಿಗೆ ಕನಿಷ್ಠ ಮೂರು ವರ್ಷ ಜೈಲುಶಿಕ್ಷೆ ವಿಧಿಸುವಂಥ ಕಾನೂನನ್ನು ಜಾರಿಗೆ ತರಬೇಕು ಎಂದರು.
ಅಷ್ಟೇ ಅಲ್ಲ, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂಥ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ನನಗೆ ಗೊತ್ತು' ಎಂದು ಸಹ ಅವರು ಲೇವಡಿ ಮಾಡಿದ್ದಾರೆ.

ಇತ್ತೀಚೆಗೆ ತಾನೇ, ತ್ರಿವಳಿ ತಲಾಖ್ ಸಂಬಂಧಿಸಿದ ಮಸೂದೆಯನ್ನು ಬೆಂಬಲಿಸಿದ್ದ ಓವೈಸಿ, ಇದು 'ತ್ರಿವಳಿ ತಲಾಖ್ ಮಹಿಳಾ ವಿರೋಧಿ' ಎಂದಿದ್ದರು.












Click it and Unblock the Notifications