• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ಗೆ ಮಾತ್ರ ರಕ್ತದಲ್ಲೂ ಬಿತ್ತನೆ ಮಾಡುವುದು ಗೊತ್ತು: ತೋಮರ್

|

ನವದೆಹಲಿ,ಫೆಬ್ರವರಿ 05: ಇಡೀ ವಿಶ್ವಕ್ಕೆ ಕೃಷಿ ಭೂಮಿಯಲ್ಲಿ ನೀರಿನಲ್ಲಿ ಬಿತ್ತನೆ ಮಾಡುವುದು ತಿಳಿದಿದೆ. ಆದರೆ, ಕಾಂಗ್ರೆಸ್‌ಗೆ ರಕ್ತದಲ್ಲಿ ಬಿತ್ತನೆ ಮಾಡುವುದೂ ಗೊತ್ತು ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಿ ತೋಮರ್ ಮಾತನಾಡಿದರು.ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಒಂದೇ ಒಂದು ಋಣಾತ್ಮಕ ಅಂಶವನ್ನು ತಿಳಿಸಲು ವಿಫಲವಾಗಿದೆ. ಕೇಲ ಹೋರಾಟಗಾರರ ದಿಕ್ಕು ತಪ್ಪಿಸಲಾಗುತ್ತಿದೆ.

ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಟ್ವಿಟ್ಟರ್ ಅಭಿಯಾನ

ಬಹುತೇಕ ಒಂದು ರಾಜ್ಯಕ್ಕೆ ಸೀಮಿತವಾಗಿರುವ ಹೋರಾಟವನ್ನು ಇಡೀ ದೇಶದಲ್ಲಿ ನಡೆಯುತ್ತಿದೆ ಎಂದು ಬಿಂಬಿಸಲಾಗುತ್ತಿದೆ.ಅದರಲ್ಲೂ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟವಿದು, ಹೋರಾಟಕ್ಕೆ ಸಂಬಂಧಿಸಿ ಸರ್ಕಾರ ಏನೂ ಮಾಡಿಲ್ಲ ಎಂಬುದು ಅಪಪ್ರಚಾರವಾಗಿದೆ ಎಂದು ತೋಮರ್ ಟೀಕಿಸಿದರು.ಹೋರಾಟದ ಆರಂಭದಿಂದಲೂ ಸರ್ಕಾರ ರೈತರ ಜತೆ ಮಾತುಕತೆ ನಡೆಸುತ್ತಿದೆ.

ಈಗಾಗಲೇ ಕಾಯ್ದೆಗೆ ಸಂಬಂಧಿಸಿಸರ್ಕಾರ ತನ್ನ ನಿಲುವನ್ನು ರೈತ ಸಂಘಟನೆಗಳಿಗೆ ಸ್ಪಷ್ಟಪಡಿಸಿದೆ, ಅವರಿಂದ ನಿರ್ದಿಷ್ಟ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ತೋಮರ್ ಹೇಳಿದರು.

ರೈತರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಆತ್ಮ ನಿರ್ಭರ ಯೋಜನೆಯಲ್ಲಿ ಕೃಷಿ ಮೂಲ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ರೂ. ಹಣ ಮೀಸಲಿಡಲಾಗಿದೆ.

ಕಳೆದ ಆರು ವರ್ಷಗಳಲ್ಲಿ ಹಿಂದಿನ ಯಾವ ಸರ್ಕಾರಗಳೂ ಮಾಡದ ರೈತ ಪರ ಯೋಜನೆಗಳನ್ನು ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಾ 72 ದಿನಗಳು ಕಳೆದಿವೆ.

English summary
The world knows that farming is done with water. Only Congress can do farming with blood," the minister said in the Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X