ಐಆರ್‌ಸಿಟಿಸಿ ಅಪ್‌ಗ್ರೇಡ್: ರೈಲು ಸೈರನ್ ಕೇಳೋವರೆಗೂ ಟಿಕೆಟ್ ಸಿಗುತ್ತೆ!
ನವದೆಹಲಿ, ಫೆಬ್ರವರಿ 28: ಅಯ್ಯೋ ಒಂದು ತಿಂಗಳ ಹಿಂದೇ ಬುಕ್ ಮಾಡ್ಬೇಕಿತ್ತು, ಈಗ ಕೊನೇ ಕ್ಷಣದಲ್ಲಿ ರೈಲು ಟಿಕೆಟ್ ಬೇಕು ಅಂದ್ರೆ ಎಲ್ಲಿ ಸಿಗುತ್ತೆ ತತ್ಕಾಲ್‌ನಲ್ಲಿ ಟಿಕೇಟ್ ಸಿಕ್ಕಿದ್ರು ರೈಲು ಬರೋವರೆಗೂ ಕನ್‌ಫರ್ಮ್ ಇರೊಲ್ಲ ಎನ್ನುವ ಮಾತು ಹಳೆಯದು..
ಐಆರ್‌ಸಿಟಿಸಿ ಅಪ್‌ಗ್ರೇಡ್ ಆಗಿದ್ದು, ಇದೀಗ ರೈಲು ಬರುವ ಕೊನೆಯ ಕ್ಷಣದವರೆಗೂ ಟಿಕೆಟ್ ಪಡೆಯಬಹುದಾಗಿದೆ. ರಿಸರ್ವೇಷನ್ ಚಾರ್ಟ್ ಒಮ್ಮೆ ಸಿದ್ಧವಾದರೆ ಯಾರೇ ಸೀಟು ಬುಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗರಿಸರ್ವೇಷನ್ ಚಾರ್ಟ್ ರೆಡಿಯಾದ ಮೇಲೂ ಕೂಡ ರೈಲು ಬರುವ 30ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಬಹುದಾಗಿದೆ.

ಪ್ರಯಾಣಿಕರು ಅಂತಿಮ ಕ್ಷಣದಲ್ಲಿ ಬಂದು ಟಿಕೆಟ್ ಕಲೆಕ್ಟರ್ ಬಳಿ ಟಿಕೆಟ್‌ಗಾಗಿ ಮನವಿ ಮಾಡುವುದನ್ನು ನೋಡಿದ್ದೇವೆ ಅಲ್ಲಿ ಸಾಕಷ್ಟು ಅವ್ಯವಹಾರ ನಡೆಯುವ ಸಾಧ್ಯತೆ ಇರುತ್ತದೆ ಹಾಗಾಗಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಸುಧಾರಿತ ಕ್ಯಾಮರಾಗಳು, ಆಹಾರ ದೊರೆಯುವ 30 ಕೇಂದ್ರಗಳನ್ನು ಐಆರ್‌ಸಿಟಿಸಿಯು ತೆರೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications