RSS ಅಂತರ್ಜಾತೀಯ ವಿವಾಹವನ್ನು ವಿರೋಧಿಸೋಲ್ಲ: ಭಾಗವತ್

Recommended Video

      RSS ಅಂತರ್ಜಾತೀಯ ವಿವಾಹವನ್ನು ವಿರೋಧಿಸೋಲ್ಲವಂತೆ | Oneindia Kannada

      ನವದೆಹಲಿ, ಸೆಪ್ಟೆಂಬರ್ 20: ರಾಷ್ಟ್ರೀಯ ಸ್ವಯಂಸೇವಕಸಂಘವು ಅಂತರ್ಜಾತೀಯ ವಿವಾಹವನ್ನು ವಿರೋಧಿಸುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

      ದೆಹಲಿಯಲ್ಲಿ ನಡೆದ ಮೂರು ದಿನಗಳ ಆರೆಸ್ಸೆಸ್ ಉಪನ್ಯಾಸ ಸರಣಿಯ ಮೂರನೇ ದಿನವಾದ ಬುಧವಾರ ಅವರು ಮಾತನಾಡುತ್ತಿದ್ದರು. 'ಸಂಘದ ಎಷ್ಟೋ ಕಾರ್ಯಕರ್ತರ ನಡುವಲ್ಲೇ ಇಂಥ ವಿವಾಹಗಳಾಗಿವೆ. ನಾವು ಅದನ್ನು ವಿರೋಧಿಸುವುದಿಲ್ಲ.' ಎಂದು ಭಾಗವತ್ ಹೇಳಿದ್ದಾರೆ.

      '1942 ರಲ್ಲಿ ಮೊದಲ ಅಂತರ್ಜಾತೀಯ ವಿವಾಹವಾದಾಗ, ಜೋಡಿಗಳಿಗೆ ಮೊದಲು ಅಭಿನಂದನೆ ಸಲ್ಲಿಸಿದ್ದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಮತ್ತು ಆರೆಸ್ಸೆಸ್ ನ ಸರಸಂಘಚಾಲಕ್ ಆಗಿದ್ದ ಗುರೂಜಿ(ಮಾಧವರಾವ್ ಗೋಳ್ವಲ್ಕರ್)' ಎಂಬುದನ್ನು ಅವರು ಸ್ಮರಿಸಿದರು.

      Not against inter-caste marriages: Mohan Bhagwat

      "ನೀವು ಕೇವಲ ದೈಹಿಕ ಆಕರ್ಷಣೆಯಿಂದ ಮದುವೆಯಾಗುತ್ತಿಲ್ಲ. ನೀವು ಎಲ್ಲರೂ ಸಮಾನ ಎಂಬುದನ್ನು ಸಾಬೀತುಪಡಿಸಲು ಮದುವೆಯಾಗಿದ್ದೀರಿ" ಎಂದು ಆ ಸಮಯದಲ್ಲಿ ದಂಪತಿಗೆ ಗುರೂಜಿ ಹೇಳಿದ್ದರು ಎಂಬುದನ್ನು ಭಾಗವತ್ ನೆನಪಿಸಿಕೊಂಡರು.

      "ಭಾರತದಲ್ಲಿ ಅಂತರ್ಜಾತೀಯ ವಿವಾಹಗಳ ಕುರಿತು ಸಮೀಕ್ಷೆ ನಡೆಸಿದರೆ, ಅತೀ ಹೆಚ್ಚು ಅಂತರ್ಜಾತೀಯ ವಿವಾಹವಾಗಿದ್ದು ಸಂಘದ ಕಾರ್ಯಕರ್ತರೇ ಎಂಬುದು ತಿಳಿಯುತ್ತದೆ" ಎಂದು ಸಹ ಭಾಗವತ್ ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+