ಮತ್ತೇರಿಸಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಅತ್ಯಾಚಾರ

ನೋಯ್ಡಾ, ಜ.13: ಇಲ್ಲಿನ ಕಾಲ್ ಸೆಂಟರ್ ಉದ್ಯೋಗಿಯೊಬ್ಬಳ ಮೇಲೆ ಸಂಸ್ಥೆ ಮಾಲೀಕ ಹಾಗೂ ಸಹ ಉದ್ಯೋಗಿಯೊಬ್ಬರು ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗುವ ಮುನ್ನ ಯುವತಿಗೆ ಮತ್ತೇರುವ ಡ್ರಗ್ಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಯುವತಿ ನೀಡಿದ ದೂರನ್ನು ಪರಿಗಣಿಸಿ ಜಿಲ್ಲಾ ನ್ಯಾಯಾಲಯ ನೋಯ್ಡಾ ಪೊಲೀಸರಿಗೆ ಶೀಘ್ರವೇ ಕ್ರಮ ಜರುಗಿಸುವಂತೆ ಸೂಚಿಸಿದೆ. ಕಾಲ್ ಸೆಂಟರ್ ಮಾಲೀಕ ಶೈಲೇಂದ್ರ ಚೌಹಾಣ್ ಹಾಗೂ ಕಂಪನಿ ಮ್ಯಾನೇಜರ್ ಜಗ್ಜೀವನ್ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಚೌಹಣ್ ಹಾಗೂ ಅತ್ಯಾಚಾರಕ್ಕೊಳಗಾಗಿರುವ ಯುವತಿ ಇಬ್ಬರು ಬಹುಕಾಲದಿಂದ ಪರಸ್ಪರ ಪರಿಚಯ ಇದ್ದವರಾಗಿದ್ದು, ನೋಯ್ಡಾ ಕಾಲ್ ಸೆಂಟರ್ ಸೇರುವ ಮುನ್ನ ಇಬ್ಬರು ಗಾಜಿಯಾಬಾದಿನಲ್ಲಿ ಒಂದು ಕಂಪನಿಯಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

Noida call centre employee accuses owner, manager of rape

ಗಾಜಿಯಾಬಾದ್ ಕಂಪನಿ ತೊರೆದ ಚೌಹಣ್ ತನ್ನದೇ ಸ್ವಂತ ಕಾಲ್ ಸೆಂಟರ್ ಆರಂಭಿಸಿದ. ನೋಯ್ಡಾ ಸೆಕ್ಟರ್ 66ರಲ್ಲಿರುವ ಈ ಕಂಪನಿಗೆ ಕಳೆದ ಮೇ ತಿಂಗಳಿನಲ್ಲಿ ತನ್ನ ಗೆಳತಿಯನ್ನು ಆಹ್ವಾನಿಸಿದ. ಚೌಹಣ್ ಗೊತ್ತಿದ್ದರಿಂದ ಅವನ ಕಂಪನಿಯಲ್ಲಿ ಉದ್ಯೋಗಿಯಾಗಲು ಒಪ್ಪಿಕೊಂಡಳು.

ಕಳೆದ ಜುಲೈ 2013ರಲ್ಲಿ ಒಂದು ದಿನ ಯುವತಿಗೆ ತಂಪು ಪಾನೀಯ ಕೊಟ್ಟ ಚೌಹಣ್ ಅದರಲ್ಲಿ ಮತ್ತೇರಿಸುವ ಮಾತ್ರೆಗಳನ್ನು ಹಾಕಿದ್ದ. ಚೌಹಾಣ್ ಎಲ್ಲಾ ಕೃತ್ಯಗಳಲ್ಲಿ ಜಗ್ಜೀವನ್ ಅವನಿಗೆ ಸಹಾಯಕನಾಗಿದ್ದ. ನಂತರ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕೆಲಸ ಕಳೆದುಕೊಳ್ಳುವ ಭಯದಿಂದ ಆಕೆ ಈ ವಿಷಯವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ.

ಘಟನೆ ನಂತರ ಚೌಹಣ್ ಕೂಡಾ ಆಕೆ ಬಳಿ ಬಂದು,' ಸ್ಸಾರಿ, ಆತುರ ಪಟ್ಟೆ ನಿನ್ನನ್ನು ಮದುವೆಯಾಗುತ್ತೇನೆ ಗಾಬರಿಯಾಗಬೇಡ' ಎಂದು ಭರವಸೆ ನೀಡಿದ್ದಾನೆ. ಆದರೆ, ಚೌಹಾಣ್ ಮದುವೆಯಾಗದೆ ಸತಾಯಿಸಿದ್ದಾನೆ. ಚೌಹಾಣ್ ಹಾಗೂ ಜಗ್ಜೀವನ್ ಮೇಲೆ ದೂರು ಸಲ್ಲಿಸಲು ಹೋದ ಯುವತಿಗೆ ಪೊಲೀಸರಿಂದಲೂ ನೆರವು ಸಿಕ್ಕಿಲ್ಲ. ಕೊನೆಗೆ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕಿದ್ದಾಳೆ. ಕೊನೆಗೂ ಈಗ ಆರೋಪಿಗಳ ಮೇಲೆ ಎಫ್ ಐಆರ್ ದಾಖಲಾಗಿ ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+