'ಮುಂದಿನ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸೋನಿಯಾ ಸ್ಪರ್ಧೆ'
ನವದೆಹಲಿ, ಡಿಸೆಂಬರ್ 16: 2019ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಅಮ್ಮನೇ ಸ್ಪರ್ಧಿಸುತ್ತಾರೆ, ನಾನು ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದಾರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ರಾಹುಲ್ ಗಾಂಧಿ ಮುಂದೆ ಸವಾಲಿನ ಹಾದಿಯಿದೆ. ಆದರೆ ಅದನ್ನು ನಿಭಾಯಿಸಬಲ್ಲರು ಎಂದು ಹೇಳಿದ್ದಾರೆ.

ಇನ್ನು ಪಕ್ಷದಲ್ಲಿ ನಾನು ಯಾವುದೇ ದೊಡ್ಡ ಪಾತ್ರವನ್ನು ನಿರ್ವಹಿಸುವುದಿಲ್ಲ. ನಾನು ರಾಯ್ ಬರೇಲಿಯಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಅಲ್ಲಿಂದ ಅಮ್ಮ ಸೋನಿಯಾ ಗಾಂಧಿ ಅವರೇ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇಪ್ಪತ್ತು ವರ್ಷದ ಪ್ರಯಾಣದಲ್ಲಿ ನಾನು ಅಮ್ಮನನ್ನು ನೋಡಿದ್ದೇನೆ. ಹಲವು ಸವಾಲುಗಳನ್ನು ಅವರು ಎದುರಿಸಿದ್ದಾರೆ. ನಾನು ನೋಡಿದ ಪೈಕಿ ಅತ್ಯಂತ ಧೈರ್ಯವಂತ ಮಹಿಳೆ ಅವರು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿಯವರು ಶುಕ್ರವಾರ ಮಾಧ್ಯಮದ ಜತೆಗೆ ಮಾತನಾಡಿ, ನಾನೀಗ ನಿವೃತ್ತಿ ಪಡೆಯಬಹುದು ಎನ್ನುವ ಮೂಲಕ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು.












Click it and Unblock the Notifications