ದೆಹಲಿಯಲ್ಲಿ ಡಿಸಿಪಿಯಿಂದಲೇ ಮಹಿಳಾ ಸಬ್‌ಇನ್ಸಪೆಕ್ಟರ್ ಹತ್ಯೆ
ನವದೆಹಲಿ, ಫೆಬ್ರವರಿ 8; ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರನ್ನು ಅವರ ಮೇಲಾಧಿಕಾರಿಯೇ ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನವದೆಹಲಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ನವದೆಹಲಿಯ ರೋಹಿಣಿ ಮೆಟ್ರೋ ನಿಲ್ದಾಣದ ಬಳಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಪ್ರತಾಪ ಗಂಜ್ ಪೊಲೀಸ್ ಠಾಣೆಯ ಪ್ರೀತಿ ಅಹ್ಲಾವತ್ (26) ಎನ್ನುವವರನ್ನು ರೋಹಿಣಿ ಪ್ರದೇಶದ ಡಿಸಿಪಿ ದೀಪಾಂಶು ಮೂರು ಬಾರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ರಾತ್ರಿ 9;30 ರ ಸುಮಾರು ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದಿದ್ದ ಡಿಸಿಪಿ ದೀಪಾಂಶು ಈ ಕೃತ್ಯ ಎಸಗಿ ಪರಾರಿಯಾಗಿದ್ದ. ಆದರೆ ಡಿಸಿಪಿ ದೀಪಾಂಶು ಶನಿವಾರ ಬೆಳಿಗ್ಗೆ ಗುಂಡಿ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ದೆಹಲಿ ಪೊಲೀಸ್ ಕಮೀಷನರ್ ಎಸ್ ಡಿ ಮಿಶ್ರಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರೀತಿ ಅಹ್ಲಾವತ್ ಅವರು 2018 ರಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಸೇವೆಗೆ ಸೇರಿದ್ದರು.

ದೆಹಲಿಯ ವಿಧಾನಸಭೆಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಆದರೆ ಇದಕ್ಕೂ ಮುನ್ನ ಮಹಿಳಾ ಸಬ್ ಇನ್ಸಪೆಕ್ಟರ್ ಅವರನ್ನೇ ಹತ್ಯೆ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಹಾಡಹಗಲೇ ಗನ್ ಹಿಡಿದುಕೊಂಡು ಬೈಕ್‌ನಲ್ಲಿ ಸಂಚರಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು.












Click it and Unblock the Notifications