ನವದೆಹಲಿಯಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ

ಬೆಂಗಳೂರು, ಮೇ 17 : ಮೋದಿ....ಮೋದಿ.....ಮೋದಿ....ಮೋದಿ ಇದು ಶನಿವಾರ ದೆಹಲಿಯಲ್ಲಿ ಕೇಳಿಬಂದ ಸಂಭ್ರಮದ ಕೂಗು. ಬಿಜೆಪಿಗೆ ಐತಿಹಾಸಿಕ ಜಯ ತಂದುಕೊಟ್ಟ ನರೇಂದ್ರ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದರು. ಬಿಜೆಪಿ ನಾಯಕರು, ಸಾವಿರಾರು ಕಾರ್ಯರ್ತರು ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು.

ಶನಿವಾರ ಬೆಳಗ್ಗೆ 11 ಗಂಟೆಯ ಸಮಾರಿಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಿದರು. ವಿಮಾನ ನಿಲ್ದಾಣದಿಂದ ರೋಡ್ ಶೋ ಮೂಲಕ ಸಾವಿರಾರು ಕಾರ್ಯರ್ತರ ಜೊತೆ ಮೋದಿ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.

ಬಿಜೆಪಿ ಕಚೇರಿ ಬಳಿ ಸೇರಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಜನರಿಗೆ ಧನ್ಯವಾದ ಸಲ್ಲಿಸಿದರು. ಲೋಕಸಭೆ ಚುನಾವಣೆಯವ ಜಯ ಬಿಜೆಪಿ ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯ ಎಂದು ಹೇಳಿದರು. ಚಿತ್ರಗಳಲ್ಲಿ ನೋಡಿ ಮೋದಿ ರೋಡ್ ಶೋ [ಪಿಟಿಐ ಚಿತ್ರಗಳು]

ದೆಹಲಿಗೆ ಆಗಮಿಸಿದ ನರೇಂದ್ರ ಮೋದಿ

ದೆಹಲಿಗೆ ಆಗಮಿಸಿದ ನರೇಂದ್ರ ಮೋದಿ

ಬಿಜೆಪಿಗೆ ಐತಿಹಾಸಿಕ ಜಯ ತಂದುಕೊಟ್ಟ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಆಗಮಿಸಿದರು.

ಮೋದಿಗೆ ಭವ್ಯ ಸ್ವಾಗತ

ಮೋದಿಗೆ ಭವ್ಯ ಸ್ವಾಗತ

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು.

ರೋಡ್ ಶೋ ನಡೆಸಿದ ಮೋದಿ

ರೋಡ್ ಶೋ ನಡೆಸಿದ ಮೋದಿ

ವಿಮಾನ ನಿಲ್ದಾಣದಿಂದ ರೋಡ್ ಶೋ ಮೂಲಕ ಸಾವಿರಾರು ಕಾರ್ಯರ್ತರ ಜೊತೆ ನರೇಂದ್ರ ಮೋದಿ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.

ಗುಲಾಬಿ ಹೂವಿನ ಸ್ವಾಗತ

ಗುಲಾಬಿ ಹೂವಿನ ಸ್ವಾಗತ

ರೋಡ್ ಶೋನಲ್ಲಿ ನರೇಂದ್ರ ಮೋದಿ ಅವರ ಮೇಲೆ ಗುಲಾಬಿ ಹೂಗಳ ಸುರಿಮಳೆಗೈಯುವ ಮೂಲಕ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.

ಮೋದಿ..ಮೋದಿ...ಮೋದಿ

ಮೋದಿ..ಮೋದಿ...ಮೋದಿ

ಮೋದಿ....ಮೋದಿ...ಮೋದಿ, ನರೇಂದ್ರ ಮೋದಿ ಜಿಂದಾಬಾದ್, ಬಿಜೆಪಿಗೆ ಜಿಂದಾಬಾದ್ ಎಂಬ ಘೋಷಣೆಗಳು ದೆಹಲಿಯ ರಸ್ತೆಗಳಲ್ಲಿ ಕೇಳಿಬಂದವು.

ವಿಜಯದ ಸಂಕೇತ ತೋರಿಸಿದ ಮೋದಿ

ವಿಜಯದ ಸಂಕೇತ ತೋರಿಸಿದ ಮೋದಿ

ಸಾವಿರಾರು ಕಾರ್ಯಕರ್ತರೊಂದಿಗೆ ಬಂದ ಮೋದಿ ಕಾರಿನ ಮೇಲೇರಿ ವಿಜಯದ ಸಂಕೇತ ತೋರಿಸುತ್ತಾ ರೋಡ್ ಶೋನಲ್ಲಿ ಪಾಲ್ಗೊಂಡರು.

ಬಿಗಿ ಪೊಲೀಸ್ ಬಂದೋಬಸ್ತ್

ಬಿಗಿ ಪೊಲೀಸ್ ಬಂದೋಬಸ್ತ್

ನರೇಂದ್ರ ಮೋದಿ ಅವರ ದೆಹಲಿಯ ರೋಡ್ ಶೋಗೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೋಡ್ ಶೋ ಸಾಗುವ ಮಾರ್ಗವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ದೆಹಲಿಯ ಜನರಿಗೆ ಕೃತಜ್ಞತೆ ಹೇಳಿದ ಮೋದಿ

ದೆಹಲಿಯ ಜನರಿಗೆ ಕೃತಜ್ಞತೆ ಹೇಳಿದ ಮೋದಿ

ಬಿಜೆಪಿ ಕಚೇರಿ ಬಳಿ ಸೇರಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಜನರಿಗೆ ಧನ್ಯವಾದ ಸಲ್ಲಿಸಿದರು.

ಸ್ವಾಗತ ಕೋರಿದ ರಾಜನಾಥ್ ಸಿಂಗ್

ಸ್ವಾಗತ ಕೋರಿದ ರಾಜನಾಥ್ ಸಿಂಗ್

ರೋಡ್ ಶೋ ಬಳಿಕ ಬಿಜೆಪಿ ಸಂಸದೀಯ ಮಂಡಳಿಯ ಸಭೆಗೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸ್ವಾಗತ ಕೋರಿದರು.

ಅಡ್ವಾಣಿ ಅಪ್ಪುಗೆಯ ಸ್ವಾಗತ

ಅಡ್ವಾಣಿ ಅಪ್ಪುಗೆಯ ಸ್ವಾಗತ

ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸಂತಸ ವ್ಯಕ್ತಪಡಿಸಿದರು.

ಅಡ್ವಾಣಿ ಆಶೀರ್ವಾದ ಪಡೆದ ಮೋದಿ

ಅಡ್ವಾಣಿ ಆಶೀರ್ವಾದ ಪಡೆದ ಮೋದಿ

ಸಂಸದೀಯ ಮಂಡಳಿ ಸಭೆಗೆ ಆಗಮಿಸಿದ ನರೇಂದ್ರ ಮೋದಿ ಎಲ್.ಕೆ.ಅಡ್ವಾಣಿ ಅವರಿಗೆ ಬಾಗಿ ನಮಸ್ಕರಿಸಿ ಆಶೀರ್ವಾದ ಪಡೆದರು.

ವಾರಣಾಸಿಗೆ ತೆರಳಿದ ಮೋದಿ

ವಾರಣಾಸಿಗೆ ತೆರಳಿದ ಮೋದಿ

ಸಂಸದೀಯ ಮಂಡಳಿ ಬಳಿಕ ನರೇಂದ್ರ ಮೋದಿ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರರೊಂದಿಗೆ ನರೇಂದ್ರ ಮೋದಿ ವಾರಣಾಸಿಗೆ ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+