ಸಲ್ಮಾನ್ ಖಾನ್ ರನ್ನು ಹಾಡಿ ಹೊಗಳಿದ ಮೋದಿ
ನವದೆಹಲಿ, ಅ.22: ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. ಸ್ವಚ್ಛಭಾರತ ಅಭಿಯಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ನಿಮ್ಮ ಈ ಕಾರ್ಯ ಇತರರಿಗೆ ಸ್ಪೂರ್ತಿಯಾಗಲಿದೆ ಇನ್ನಷ್ಟು ಜನರು ಈ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಮೋದಿ ಅವರಿಂದ ನಾಮಾಂಕಿತರಾಗಿದ್ದ ಸಲ್ಮಾನ್ ಖಾನ್ ಅವರು ಮಂಗಳವಾರ ಮುಂಬೈನ ಕರ್ಜಾತ್ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಚಿತ್ರಗಳನ್ನು ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಲ್ಮಾನ್ ಅವರ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. [ದಿಗ್ಗಜರ ಸಮಾಗಮಕ್ಕೆ ಕಾರಣವಾದ ಸ್ವಚ್ಛ ಭಾರತ]
ನಂತರ ಸಲ್ಮಾನ್ ಖಾನ್ ಕೂಡಾ ಮೋದಿ ಅವರಂತೆ 9 ಜನರನ್ನು ನಾಮಾಂಕಿತಗೊಳಿಸಿ ಸ್ವಚ್ಛತಾ ಅಭಿಯಾನವನ್ನು ಮುಂದುವರೆಸುವಂತೆ ಸಾಮಾಜಕ ಜಾಲ ತಾಣಗಳಲ್ಲಿ ಕೇಳಿಕೊಂಡಿದ್ದಾರೆ. ಕೊನೆಯಲ್ಲಿ ಮೋದಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತದಾನದ ದಿನ(ಅ.15) ಮತದಾನದ ಹಕ್ಕು ತಪ್ಪದೇ ಚಲಾಯಿಸಿ ಈಗ ಸೋಮಾರಿತನದಿಂದ ಕಾಲವ್ಯಯ ಮಾಡಿ ನಂತರ ಸರ್ಕಾರವನ್ನು ದೂರಬೇಡಿ ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಸಲ್ಮಾನ್ ಅವರ ಸ್ವಚ್ಛತಾ ಅಭಿಯಾನದ ಚಿತ್ರಗಳು ಮೋದಿ-ಸಲ್ಮಾನ್ ಟ್ವೀಟ್ ಹೊಗಳಿಕೆ ವಿವರ ಮುಂದಿದೆ. (ಐಎಎನ್ಎಸ್) ಚಿತ್ರಕೃಪೆ: @BeingSalmanKhan

ಸ್ವಚ್ಛತಾ ಅಭಿಯಾನದಲ್ಲಿ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು ಮಂಗಳವಾರ ಮುಂಬೈನ ಕರ್ಜಾತ್ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಚಿತ್ರಗಳನ್ನು ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಸಲ್ಮಾನ್ ಗೆ ಮೆಚ್ಚುಗೆಯ ಮಹಾಪೂರ
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸಲ್ಮಾನ್ ಖಾನ್ ಅವರಿಗೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು.
|
ನರೇಂದ್ರ ಮೋದಿ ಅವರಿಂದ ಸಲ್ಮಾನ್ ಹೊಗಳಿಕೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲ್ಮಾನ್ ಹೊಗಳಿಕೆ ಟ್ವೀಟ್

ಸಲ್ಲೂ ಯಾರನ್ನು ನಾಮಿನೇಟ್ ಮಾಡಿದ್ರು?
ಸಲ್ಮಾನ್ ಅವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ಹಿಂಬಾಲಕರನ್ನು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾಮಿನೇಟ್ ಮಾಡಿದ್ದಾರೆ. ನಂತರ ಅಮೀರ್ ಖಾನ್, ಅಜಿಂ ಪ್ರೇಂಜಿ, ಚಂದಾ ಕೊಚ್ಚರ್, ಓಮರ್ ಅಬ್ದುಲ್ಲಾ, ಪ್ರದೀಪ್ ಧೂತ್, ರಜತ್ ಶರ್ಮ, ರಜನಿಕಾಂತ್ ಹಾಗೂ ವಿನೀತ್ ಜೈನ್ ಅವರಿಗೆ ಆಮಂತ್ರಣ ನೀಡಿದ್ದಾರೆ.
|
ಮೋದಿ ಅವರಿಗೆ ಥ್ಯಾಂಕ್ಸ್ ಎಂದ ಸಲ್ಮಾನ್
ನನಗೆ ಆಮಂತ್ರಣ ನೀಡಿದ ಮೋದಿ ಅವರಿಗೆ ಥ್ಯಾಂಕ್ಸ್ ಎಂದ ಸಲ್ಮಾನ್ ಖಾನ್

ಗಾಂಧೀಜಯಂತಿ ದಿನ ಆರಂಭವಾದ ಯೋಜನೆ
ಗಾಂಧೀಜಯಂತಿ ದಿನ ಆರಂಭವಾದ ಸ್ವಚ್ಛತಾ ಅಭಿಯಾನ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಸಲ್ಮಾನ್ ಖಾನ್, ಕಮಲ್ ಹಾಸನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ ಅನೇಕ ಸೆಲೆಬ್ರಿಟಿಗಳಿಗೆ ಪ್ರಧಾನಿ ಮೋದಿ ಅವರು ಆಮಂತ್ರಣ ನೀಡಿದ್ದರು.












Click it and Unblock the Notifications