ಟಿಕೆಟ್ ಪಡೆಯಲು ಕೇಜ್ರಿವಾಲ್ ಗೆ 6 ಕೋಟಿ? ಅಪ್ಪನ ವಿರುದ್ಧವೇ ಮಗನ ಆರೋಪ

ನವದೆಹಲಿ, ಮೇ 11: ಚುನಾವಣಾ ಹೊಸ್ತಿಲಲ್ಲಿರುವ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೊಬ್ಬರು ಕೋಟಿ ಕೋಟಿ ಹಣ ನೀಡಿ ಟಿಕೆಟ್ ಪಡೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ದೆಹಲಿಯಲ್ಲಿ ಈಗಾಗಲೇ ಬಹಿರಂಗ ಪ್ರಚಾರ ಮುಗಿದಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ಮಗ, ದೆಹಲಿಯ ಮುಖ್ಯಮಂತ್ರಿ ಮತ್ತು ಆಪ್ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ವಿರುದ್ದ ಗುರುತರ ಆರೋಪವನ್ನು ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪಶ್ಚಿಮ ದೆಹಲಿ ಕ್ಷೇತ್ರದ ಆಪ್ ಅಭ್ಯರ್ಥಿ ಬಲ್ಬೀರ್ ಸಿಂಗ್ ಜಾಖರ್ ಪುತ್ರ ಉದಯ್ ಜಾಖರ್, ಪಕ್ಷದ ಟಿಕೆಟ್ ಪಡೆಯಲು ನನ್ನ ತಂದೆ ಆರು ಕೋಟಿ ರೂಪಾಯಿಯನ್ನು ಕೇಜ್ರಿವಾಲ್ ಅವರಿಗೆ ನೀಡಿದ್ದಾರೆಂದು, ಉದಯ್ ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

My father paid 6 crores to Kejriwal for West Delhi party ticket, candidate son allegation

ಮೂರು ತಿಂಗಳ ಹಿಂದೆ ನನ್ನ ತಂದೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು, ಆ ವೇಳೆ ಆರು ಕೋಟಿ ರೂಪಾಯಿಯನ್ನು ಕೇಜ್ರಿವಾಲ್ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ನನ್ನಲ್ಲಿ ಎವಿಡೆನ್ಸ್ ಇದೆ ಎಂದು ಉದಯ್ ಜಾಖರ್ ಹೇಳಿದ್ದಾರೆ.

ನನ್ನ ಈ ಹೇಳಿಕೆ ಪ್ರಸಾರವಾದ ನಂತರ, ನನ್ನನ್ನು ಮನೆಗೆ ವಾಪಸ್ ಸೇರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆರು ಕೋಟಿ ರೂಪಾಯಿ ಹಣವನ್ನು ನೇರವಾಗಿ ಕೇಜ್ರಿವಾಲ್ ಅವರಿಗೆ ನೀಡಲಾಗಿದೆ. ಈ ದೇಶದ ನಾಗರೀಕನಾಗಿ ಈ ವಿಷಯವನ್ನು ಜನರ ಮುಂದೆ ಇಡುವುದು ನನ್ನ ಕರ್ತವ್ಯ ಎಂದು ಅಭ್ಯರ್ಥಿಯ ಪುತ್ರ ಹೇಳಿದ್ದಾರೆ. ಆದರೆ, ಚುನಾವಣೆಗೆ ಒಂದು ದಿನ ಮುನ್ನ, ಇವರ ಹೇಳಿಕೆ ಹಲವು ಸಂಶಯಕ್ಕೂ ಕಾರಣವಾಗಿದೆ.

ಇದೇ ಭಾನುವಾರ (ಮೇ 12) ನಡೆಯಲಿರುವ ಆರನೇ ಹಂತದ ಚುನಾವಣೆಯಲ್ಲಿ ದೆಹಲಿ ವ್ಯಾಪ್ತಿಯ ಎಲ್ಲಾ ಏಳು ಕ್ಷೇತ್ರಗಳ ಚುನಾವಣೆಯೂ ನಡೆಯಲಿದೆ. ಬಿಜೆಪಿ - ಆಪ್ - ಕಾಂಗ್ರೆಸ್ ನಡುವೆ ಇಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.

ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಆಪ್ ನಿಂದ ಬಲ್ಬೀರ್ ಸಿಂಗ್ ಜಾಖರ್, ಕಾಂಗ್ರೆಸ್ಸಿನಿಂದ ಮಹಾಬಲ ಮಿಶ್ರಾ ಮತ್ತು ಬಿಎಸ್ಪಿಯಿಂದ ಸೀತಾ ಶರಣ್ ಸೇನ್ ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+