ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ

ನವದೆಹಲಿ, ಜನವರಿ 16: ದೆಹಲಿ ನಗರದ ತುಂಬಾ ಶನಿವಾರ ನಸುಕಿನ ಜಾವ ದಟ್ಟವಾದ ಮಂಜು ಆವರಿಸಿದ್ದು, ಈ ವ್ಯತಿರಿಕ್ತ ಹವಾಮಾನದಿಂದಾಗಿ 50ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿರುವುದಾಗಿ ತಿಳಿದುಬಂದಿದೆ.

ಶನಿವಾರ ನಗರದ ಮೇಲೆ ದಟ್ಟ ಮಂಜು ಹೊದ್ದುಕೊಂಡಿದ್ದು, ವಿಪರೀತ ಶೀತಗಾಳಿ ಆವರಿಸಿದ್ದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ವಿಮಾನ ಹಾರಾಟಕ್ಕೂ ಅಡ್ಡಿಯಾಗಿ ಐವತ್ತಕ್ಕೂ ಹೆಚ್ಚು ವಿಮಾನಗಳು ವಿಳಂಬವಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಡಿಗೋ ಹಾಗೂ ಸ್ಪೈಸ್ ಜೆಟ್ ವಿಮಾನಗಳಿಗೆ ಅಡಚಣೆಯಾಗಿದ್ದು, ಉತ್ತರ ದೆಹಲಿಯಲ್ಲಿ 19 ರೈಲುಗಳಿಯೂ ಅಡ್ಡಿಯಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಡಿಸೆಂಬರ್ 8, ಜನವರಿ 1ರಂದು ಇದೇ ಪರಿಸ್ಥಿತಿ ಉಂಟಾಗಿದ್ದು, ಶನಿವಾರ ಮೂರನೇ ಬಾರಿ ಮತ್ತೆ ಮಂಜು ವ್ಯಾಪಕವಾಗಿ ಆವರಿಸಿತ್ತು.

More Than 50 Flights Delayed Due To Dense Fog In Delhi

ದೆಹಲಿಯಲ್ಲಿ ವಾಯು ಗುಣಮಟ್ಟವೂ ಗಂಭೀರ ಮಟ್ಟದಲ್ಲಿ ಕುಸಿಯುತ್ತಿದ್ದು, ಶೀತಗಾಳಿ ಹೆಚ್ಚುತ್ತಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+