ತೈಲ ಬೆಲೆಯಲ್ಲಿ ಮತ್ತೆ ಇಳಿಕೆ, ಜನಸಾಮಾನ್ಯ ಕೊಂಚ ನಿರಾಳ
ನವದೆಹಲಿ, ಅಕ್ಟೋಬರ್ 27: ಸತತ ಎಂಟನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕನಲ್ಲಿ ಕೊಂಚ ನಿರಾಳತೆಯನ್ನುಂಟು ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕೊಂಚ ಇಳಿಕೆಯಾದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗುತ್ತಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80.45 ರೂ. ಇದ್ದರೆ ಡೀಸೆಲ್ ಬೆಲೆ ಲೀ.ಗೆ 75.38 ರೂ. ಆಗಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 85.93 ರೂ. ಆದರೆ, ಡೀಸೆಲ್ ಬೆಲೆ 77.96 ರೂ. ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 38 ಪೈಸೆಯಷ್ಟು ಕಡಿಮೆಯಾಗಿದ್ದರೆ, ಮುಂಬೈಯಲ್ಲಿ ಪ್ರತಿ ಲೀಟರ್ ಗೆ 60 ಪೈಸೆಯಷ್ಟು ದರ ಕಡಿಮೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಫನಿಗಳು ಕಳೆದ ಕೆಲ ದಿನಗಳಿಂದ ಪೈಸೆಗಳ ಲೆಕ್ಕದಲ್ಲಿ ತೈಲ ದರವನ್ನು ಇಳಲಿಸುತ್ತಿರುವುದರಿಂದ ಕಳೆದ ಒಂದು ವಾರದಿಂದ ತೈಲ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬರುತ್ತಿದೆ.
ಗಗನಮುಖಿಯಾಗಿದ್ದ ತೈಲ ಬೆಲೆ ಸದ್ಯಕ್ಕೆ ಇಳಿಕೆ ಕಂಡುಬರುತ್ತಿರುವುದು ಜನಸಾಮಾನ್ಯನ ಮೊಗದಲ್ಲಿ ನಿರಾಳತೆಯನ್ನುಂಟು ಮಾಡಿದೆ.











Click it and Unblock the Notifications