ಪಾಕ್ ಪ್ರಧಾನಿಗೆ ಮೋದಿ ಆಹ್ವಾನ: ಮೆಚ್ಚುಗೆಯ ಮಹಾಪೂರ
ನವದೆಹಲಿ, ಮೇ 21: ಭಾರತದ ನೂತನ ಪ್ರಧಾನಿಯಾಗಿ ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಮೇ 26 ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನರೇಂದ್ರ ದಾಮೋದರದಾಸ್ ಮೋದಿ ಅವರು ಭಾರತದ 15ನೇ ಪ್ರಧಾನಿಯಾಗಿ ಪದಗ್ರಹಣ ಮಾಡುವ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ನೆರೆಯ ರಾಷ್ಟ್ರಗಳ ನಾಯಕರಿಗೆ ನರೇಂದ್ರ ಮೋದಿ ಅವರು ಆಹ್ವಾನ ನೀಡಿದ್ದಾರೆ.

ಸಾರ್ಕ್ (SAARC) ರಾಷ್ಟ್ರಗಳ ಕೂಟದಲ್ಲಿರುವ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಫ್ಘಾನಿಸ್ತಾನದ ಜೊತೆಗೆ ಭಾರತ ಉತ್ತಮ ಹಾಗೂ ಸ್ನೇಹಿ ಸಂಬಂಧವನ್ನು ಹೊಂದಲು ಮೋದಿ ಅವರ ಹೊಸ ಚಿಂತನೆ ಇದಾಗಿದೆ ಎಂದು ರಾಜಕೀಯ ಪಂಡಿತರು ವ್ಯಾಖ್ಯಾನಿಸುತ್ತಿದ್ದಾರೆ.
ಒಮರ್ ಅಬ್ದುಲ್ಲಾ ಅವರು ಈ ಬಗ್ಗೆ ಟ್ವೀಟ್ ಮಾಡಿ, ಆರಂಭಿಕ ಯತ್ನದಲ್ಲೇ ಪಾಕ್ ಜತೆಗೆ ಉತ್ತಮ ಬಾಂಧವ್ಯ ಹೊಂದುವ ಸಲುವಾಗಿ ಮೋದಿ ಅವರ ಈ ಪ್ರಯತ್ನ ಸ್ವಾಗತಾರ್ಹ ಮತ್ತು ಸ್ತುತ್ಯರ್ಹ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Excellent move by @narendramodi to invite SAARC leaders, especially Pak PM for his swearing in. Hope this is beginning of sustained talks.
— Omar Abdullah (@abdullah_omar) May 21, 2014 ಸಾರ್ಕ್ ಕೂಟದ ನಾಯಕರಿಗೆ ವಿಶೇಷ ಆಮಂತ್ರಣ ನೀಡುವ ಮೂಲಕ ಹೊಸ ಭಾಷ್ಯ ಬರೆದಿದ್ದಾರೆ. ನಿನ್ನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಈ ಪ್ರಸ್ತಾಪವನ್ನು ಸಲ್ಲಿಸಿದ್ದು, ಈ ಸಂಬಂಧ ವಿದೇಶಾಂಗ ಸಚಿವಾಲಯವು ಮೋದಿ ಆಹ್ವಾನದ ಪತ್ರಿಕೆಯನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಕುತೂಹಲದ ಸಂಗತಿಯೆಂದರೆ ಭಾರತದ ಪ್ರಧಾನಿ ಪದಗ್ರಹಣ ಮಾಡುವಾಗ ವಿದೇಶಿ ನಾಯಕರುಗಳಿಗೆ ಆಮಂತ್ರಣ ನೀಡುವ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಕಂಡುಬಂದಿಲ್ಲ. ಇದೀಗ ಮೋದಿ ಅವರ ಈ ನಡೆ ನೆರೆಯ ರಾಷ್ಟ್ರಗಳಲ್ಲಿ ಭೀತಿ ವಾತಾವರಣವನ್ನು ದೂರ ಮಾಡಿ, ಸೌಹಾರ್ಧತೆಗೆ ಅವಕಾಶ ಮಾಡಿಕೊಡಲಿದೆ ಎಂದು ಆಶಿಸಲಾಗಿದೆ.












Click it and Unblock the Notifications