ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ತಗ್ಗದ ಪ್ರಮಾಣ

ನವದೆಹಲಿ, ಆಗಸ್ಟ್, 08 : ಮನೆ, ರಸ್ತೆ, ಕಚೇರಿ ಸೇರಿದಂತೆ ಎಲ್ಲೆಡೆಯಲ್ಲಿಯೂ ಒಂದಲ್ಲಾ ಒಂದು ಕಾರಣಕ್ಕೆ ಮಹಿಳೆಯರು ದಿನನಿತ್ಯ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ.

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ ಕುರಿತು ಅಧ್ಯಯನ ಕೈಗೊಂಡ ಸರ್ಕಾರ ಶುಕ್ರವಾರ ವರದಿ ಸಲ್ಲಿಕೆ ಮಾಡಿದ್ದು, ಇದನ್ನು ತಡೆಗಟ್ಟಲು ಕೆಲವು ಕಾನೂನುಗಳ ಜಾರಿಗೆ ಯೋಜನೆ ರೂಪಿಸುತ್ತಿದೆ.[ಸಸಿ ನೆಟ್ಟು ಹೆಣ್ಣು ಮಗುವಿನ ಜನನ ಸ್ವಾಗತಿಸುವ ಗ್ರಾಮಸ್ಥರು]

Maneka says 526 cases of sexual harassment of women at work reported in 2014

ಈ ಅಧ್ಯಯನದ ಪ್ರಕಾರ ಸುಮಾರು 526 ಪ್ರಕರಣಗಳು ಬಯಲಿಗೆ ಬಂದಿದ್ದು, ಅದರಲ್ಲಿ ಸುಮಾರು 57 ಕಿರುಕುಳಗಳು ಕಚೇರಿಗಳಲ್ಲಿ, ಇನ್ನುಳಿದ 469 ಕೇಸುಗಳು ಕೆಲಸದ ಬೇರೆ ಸ್ಥಳಗಳಲ್ಲಿ ನಡೆದ ಲೈಂಗಿಕ ಕಿರುಕುಳವನ್ನು ಪತ್ತೆ ಹಚ್ಚಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (NCRB) ಸಂಸ್ಥೆಯು 'ಇನ್ ಸಲ್ಟ್ ಟು ದ ಮಾಡೆಸ್ಟಿ ಆಫ್ ವುಮೆನ್' ಎಂಬ ಐಪಿಸಿ ಸೆಕ್ಷನ್ 509ನೇ ಕಾಯ್ದೆ ಅಡಿಯಲ್ಲಿ ಕೆಲಸದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದ ದತ್ತಾಂಶ ಸಂಗ್ರಹಿಸಿದೆ.

ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ದೇಶದಲ್ಲಿ ಹೇರಳವಾಗುತ್ತಿದ್ದು, ಹಲವು ಪ್ರಕರಣಗಳು 18ಕ್ಕಿಂತ ಕಡಿಮೆ ವಯೋಮಾನದವರಿಗೆ ಸಂಬಂಧಪಟ್ಟಿದೆ. ಇವರ ಮೇಲೆ ನಡೆದ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದ್ದು, 2012ರಲ್ಲಿ 8,541, 2013ರಲ್ಲಿ 12,363 ಮತ್ತು 2014ರಲ್ಲಿ 13,766 ಪ್ರಕರಣಗಳು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+