ಮನೆ ಮುಂದೆ ಶೌಚ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನ ಕೊಲೆ
ನವದೆಹಲಿ, ಜೂನ್ 4: ಮನೆಮುಂದೆ ಶೌಚ ಮಾಡಬೇಡಿ ಎಂದಿದ್ದಕ್ಕೆ ಮನೆ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆನವದೆಹಲಿಯ ಗೋವಿಂದ್ ಪುರಿ ಪ್ರದೇಶದಲ್ಲಿ ನಡೆದಿದೆ.
ಲಿಲು ಮೃತವ್ಯಕ್ತಿ, ಪೊಲೀಸ್ ರೆಕಾರ್ಡ್‌ನಲ್ಲಿ ಆತನ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಲಿಲು ಹಾಗೂ ಪತ್ನಿ ಮನೆಯ ಹೊರಗಡೆ ಕುಳಿತಿದ್ದರು. ಆಗ ಕರೆಂಟ್ ಕೂಡ ಇರಲಿಲ್ಲ.
ಆ ಸಂದರ್ಭದಲ್ಲಿ ಅದೇ ಬೀದಿಯಲ್ಲಿ ವಾಸಿವಿದ್ದ 65 ವರ್ಷದ ವ್ಯಕ್ತಿಯೊಬ್ಬ ಬೀದಿಯಲ್ಲಿ ಶೌಚ ಮಾಡುತ್ತಿದ್ದ, ಅದಕ್ಕೆ ಲಿಲು ತೀವ್ರ ವಿರೋಧ ವ್ಯಕ್ತಪಡಿಸಿ ಆತನಿಗೆ ಥಳಿಸಿದ್ದ.

ಬಳಿಕ ಆ ವೃದ್ಧನ ಇಬ್ಬರು ಗಂಡು ಮಕ್ಕಳು ಬಂದಾಗ ಲಿಲು ಮತ್ತು ಆ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು. ಅದರಲ್ಲಿ ಒಬ್ಬ ಮಗ ಸಿಮೆಂಟ್ ಸ್ಲ್ಯಾಬ್ ತೆಗೆದುಕೊಂಡು ಲಿಲು ತಲೆಗೆ ಹೊಡೆದಿದ್ದಾನೆ, ಲಿಲು ಎಚ್ಚರ ತಪ್ಪುವಲ್ಲಿಯವರೆಗೂ ಹೊಡೆದಿದ್ದಾನೆ.
ತಕ್ಷಣ ಲಿಲುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿಯವರೆಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಜಗಳದಲ್ಲಿ ಆ ಇಬ್ಬರು ಅಪರಾಧಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಮೂವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಲಿಲು ಸರಗಳ್ಳತನ, ದರೋಡೆ ಇನ್ನಿತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.












Click it and Unblock the Notifications