ತಡವಾಗಿ ಎದ್ದೆಯೆಂದು ಬೈದಿದ್ದಕ್ಕೆ ಹೆಂಡತಿಯನ್ನು ಕೊಂದೇಬಿಟ್ಟ!

ನವದೆಹಲಿ, ಫೆಬ್ರವರಿ 05: ಬೆಳಿಗ್ಗೆ ತಡವಾಗಿ ಎಳುತ್ತೀಯೆಂದು ಬೈಯುತ್ತಿದ್ದ ಹೆಂಡತಿಯನ್ನು ಚಿರನಿದ್ರಿಗೆ ಕಳುಹಿಸಿಬಿಟ್ಟಿದ್ದಾನೆ ಇಲ್ಲೊಬ್ಬ ಗಂಡ!

ಹೌದು, ರಾಷ್ಟ್ರರಾಜಧಾನಿ ನವದೆಹಲಿ ಬಳಿ ಹೀಗೊಂದು ವಿಚಿತ್ರ ಘಟನೆ ನಡೆದಿದೆ. ತಡವಾಗಿ ಎದ್ದಿದ್ದಕ್ಕೆ ಬೈದ ಹೆಂಡತಿಯನ್ನು ಕೊಂದು ಪರಲೋಕಕ್ಕೆ ಅಟ್ಟಿದ್ದಾನೆ.

ದೆಹಲಿಗೆ ಸಹೋದರ ಮನೆಗೆ ಬಂದಿದ್ದ ಗಾಜಿಯಾಬಾದ್‌ನ ನಿವಾಸಿ ಫಜರುದ್ದೀನ್ ಎಂಬಾತ ಅನಾರೋಗ್ಯಕ್ಕೆ ತುತ್ತಾಗಿದ್ದ ಮಡದಿ ಸಮಿನಾ ಅವರನ್ನು ಆಸ್ಪತ್ರೆಗೆ ತೋರಿಸಲೆಂದು ಆಕೆಯನ್ನು ದೆಹಲಿಯ ತನ್ನ ತಮ್ಮನ ಮನೆಗೆ ಕರೆದುಕೊಂಡು ಬಂದಿದ್ದ.

Man Killed Wife For Taunted For Waking Up Late

ಮಂಗಳವಾರ ಬೆಳಿಗ್ಗೆ ಫಜರುದ್ದೀನ್ ತಡವಾಗಿ ಎದ್ದಿದ್ದಾನೆ. ಇದರಿಂದ ಸಿಟ್ಟಾಗಿದ್ದ ಮಡದಿ ಸಾಮಿನಾ ಮನೆಯಲ್ಲಿದ್ದ ತನ್ನ ತಂಗಿಯ ಎದುರೇ ಗಂಡನನ್ನು ಬೈದಿದ್ದಾಳೆ. ಇಷ್ಟಕ್ಕೇ ಸಿಟ್ಟಾದ ಫಜರುದ್ದೀನ್ ಮೊದಲಿಗೆ ಎಚ್ಚರಿಕೆ ನೀಡಿದ್ದಾನೆ. ಬೈಗುಳ ಹೆಚ್ಚಾದಂತೆ ಕತ್ತು ಹಿಸುಕಿ ಸಾಮಿನಾಳನ್ನು ಕೊಂದೇಬಿಟ್ಟಿದ್ದಾನೆ.

ತೀವ್ರ ಅಸ್ವಸ್ಥಗೊಂಡಿದ್ದ ಸಮಿನಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಆಕೆಯನ್ನು ಪರೀಕ್ಷಿಸಿದ ಸಿಬ್ಬಂದಿ ಸಮೀನಾ ಸತ್ತಿರುವುದಾಗಿ ಘೋಷಿಸಿದ್ದಾರೆ.

ಫಜರುದ್ದೀನ್ ವಿರುದ್ದ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಿದ್ದಾರೆ. ಎಲೆಕ್ಟ್ರೀಷಿಯನ್ ಆಗಿದ್ದ ಫಜುರುದ್ದೀನ್‌ ಗೆ ಮೂರು ಮಕ್ಕಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+