ಮಹಾರಾಷ್ಟ್ರದಲ್ಲಿ 5537 ಕೊರೊನಾ ಕೇಸ್, ದೆಹಲಿ, ತಮಿಳುನಾಡಿನಲ್ಲಿ ಎಷ್ಟು?
ದೆಹಲಿ, ಜುಲೈ 1: ಬುಧವಾರದ ಬೆಳಿಗ್ಗಿನ ವರದಿಯಂತೆ ಭಾರತದಲ್ಲಿ 5,85,493 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಬುಧವಾರ ಸಂಜೆ ವೇಳೆಗೆ ದೇಶದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ.
Recommended Video
ಜುಲೈ 1ರಂದ ಸಂಜೆ ವೇಳೆಗೆ ಕರ್ನಾಟಕದಲ್ಲಿ 1272 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇನ್ನುಳಿದಂತೆ ದೇಶದ ಕೊರೊನಾ ಹಾಟ್‌ಸ್ಪಾಟ್ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇಂದು ಎಷ್ಟು ಕೇಸ್ ಪತ್ತೆಯಾಗಿದೆ. ಮುಂದಿದೆ ವಿವರ.

ಮಹಾರಾಷ್ಟ್ರದಲ್ಲಿ 5 ಸಾವಿರ ಗಡಿ ದಾಟಿದೆ
- ಮಹಾರಾಷ್ಟ್ರದಲ್ಲಿ ಇಂದು 5537 ಮಂದಿಗೆ ಕೊರೊನಾ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,80,298ಕ್ಕೆ ಜಿಗಿದಿದೆ. ಕಳೆದ 24 ಗಂಟೆಯಲ್ಲಿ 198 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 8053 ಜನರು ಸಾವನ್ನಪ್ಪಿದ್ದಾರೆ.
- ಆಂಧ್ರಪ್ರದೇಶ: ರಾಜ್ಯದಲ್ಲಿ ಹೊಸ 657 ಕೋವಿಡ್-19 ಕೇಸ್‌ಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 15,000 ಗಡಿದಾಟಿದೆ.
- ತೆಲಂಗಾಣದಲ್ಲಿ ಇಂದು 1018 ಜನರಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,357ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ 3882 ಮಂದಿಗೆ ಕೊರೊನಾ
- ತಮಿಳುನಾಡಿನಲ್ಲಿ 3882 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94049ಕ್ಕೆ ಏರಿಕೆಯಾಗಿದೆ.
- ಕೇರಳದಲ್ಲಿ ಒಂದೇ ದಿನ 151 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4593ಕ್ಕೆ ಏರಿಕೆಯಾಗಿದೆ.
- ಮಣಿಪುರದಲ್ಲಿ ಹೊಸದಾಗಿ 26 ಜನರಿಗೆ ಕೊವಿಡ್ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,260ಕ್ಕೆ ಜಿಗಿದಿದೆ.

ದೆಹಲಿಯಲ್ಲಿ 2442 ಕೇಸ್ ಪತ್ತೆ
- ದೆಹಲಿಯಲ್ಲಿ 2442 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ರಾಷ್ಟ್ರರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 89802ಕ್ಕೆ ಏರಿದೆ. ಪ್ರಸ್ತುತ 27007 ಕೇಸ್ ಸಕ್ರಿಯವಾಗಿದೆ.
- ರಾಜಸ್ಥಾನದಲ್ಲಿ ಹೊಸದಾಗಿ 298 ಮಂದಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18312ಕ್ಕೆ ಏರಿದೆ.
- ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 611 ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ 19,170ಕ್ಕೆ ಏರಿಕೆಯಾಗಿದೆ. ಈವರೆಗೂ ರಾಜ್ಯದಲ್ಲಿ 683 ಮಂದಿ ಮೃತಪಟ್ಟಿದ್ದಾರೆ.

ಗುಜರಾತ್‌ನಲ್ಲಿ ಇಂದು ಎಷ್ಟು ಕೇಸ್?
- ಗುಜರಾತ್‌ನಲ್ಲಿ ಇಂದು 675 ಮಂದಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,318ಕ್ಕೆ ಜಿಗಿದಿದೆ.
- ಜಮ್ಮು ಕಾಶ್ಮೀರದಲ್ಲಿ ಇಂದು 198 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಕೇಸ್‌ನ ಸಂಖ್ಯೆ 7695ಕ್ಕೆ ಜಿಗಿದಿದೆ.
- ಉತ್ತರಾಖಂಡದಲ್ಲಿ ಇಂದು 66 ಜನರಿಗೆ ಕೊರೊನಾ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2947ಕ್ಕೆ ಏರಿಕೆಯಾಗಿದೆ.

ಪಂಜಾಬ್‌ನಲ್ಲಿ ಎಷ್ಟು ಸೋಂಕು ವರದಿ?
- ಪಂಜಾಬ್‌ನಲ್ಲಿ ಹೊಸದಾಗಿ 101 ಜನರಿಗೆ ಕೊವಿಡ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,668ಕ್ಕೆ ಏರಿಕೆಯಾಗಿದೆ.
- ಹಿಮಾಚಲ ಪ್ರದೇಶದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 960ಕ್ಕೆ ಏರಿಕೆಯಾಗಿದೆ.
- ಹರ್ಯಾಣದಲ್ಲಿ ಇಂದು 393 ಜನರಿಗೆ ಕೊವಿಡ್ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,941ಕ್ಕೆ ಏರಿಕೆಯಾಗಿದೆ.












Click it and Unblock the Notifications