'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ
Recommended Video
ನವದೆಹಲಿ, ಮೇ 8: ಸಾಗರ ಗಡಿಯ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ಆಗಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅವರ ಕುಟುಂಬ ರಜೆಯ ಮೋಜಿಗಾಗಿ ಬಳಸಿಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ರಾಜೀವ್ ಗಾಂಧಿ ನಂಬರ್ ಒನ್ ಭ್ರಷ್ಟಾಚಾರಿ ಎಂದು ಆರೋಪಿಸಿದ್ದ ಮೋದಿ, ಮಾಜಿ ಪ್ರಧಾನಿ ವಿರುದ್ಧದ ವಾಗ್ದಾಳಿಯನ್ನು ಬುಧವಾರವೂ ಮುಂದುವರಿಸಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ಐಎನ್‌ಎಸ್ ವಿರಾಟ್ ನೌಕೆಯನ್ನು ದೇಶದ ಸಮುದ್ರ ತೀರದ ಗಡಿಯಲ್ಲಿ ಕಾವಲು ಕಾಯಲು ನಿಯೋಜಿಸಲಾಗಿತ್ತು. ಆದರೆ, ಅದನ್ನು ರಜೆಯನ್ನು ಕಳೆಯಲು ದ್ವೀಪಕ್ಕೆ ಹೊರಟಿದ್ದ ರಾಜೀವ್ ಗಾಂಧಿ ಮತ್ತು ಅವರ ಕುಟುಂಬವನ್ನು ಕರೆಯೊಯ್ಯಲು ಬಳಸಲಾಯಿತು. ಅವರ ಅಳಿಯ ಕೂಡ ಐಎನ್‌ಎಸ್ ವಿರಾಟ್ ಒಳಗೆ ಇಳಿದಿದ್ದರು. ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿಯಲ್ಲವೇ? ಎಂದು ಪ್ರಶ್ನಿಸಿದರು.

ದ್ವೀಪದಲ್ಲಿ ರಜೆಯ ಮೋಜು ಅನುಭವಿಸಲು ಬಂದಿದ್ದ ರಾಜೀವ್ ಗಾಂಧಿ ಮತ್ತು ಅವರ ಕುಟುಂಬದ ಸೇವೆಗೆಂದು ನೌಕಾಪಡೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಹತ್ತು ದಿನಗಳವರೆಗೂ ಐಎನ್‌ಎಸ್ ವಿರಾಟ್‌ಅನ್ನು ದ್ವೀಪದಲ್ಲಿಯೇ ನಿಲ್ಲಿಸಲಾಗಿತ್ತು ಎಂದು ಆರೋಪಿಸಿದರು.
#WATCH PM Modi in Delhi: At the time when, INS Virat was positioned for protection of maritime boundaries, it was sent to take Rajiv Gandhi and his family to an island for their holiday. Even his in-laws were onboard INS Virat. Was it not a compromise of national security? pic.twitter.com/3RXdtJHF2m
— ANI (@ANI) 8 May 2019
ಕಾಂಗ್ರೆಸ್‌ನ ನಾಲ್ಕನೇ ನಾಮಧಾರಿ ಪೀಳಿಗೆಗಾಗಿ ದೇಶ ನೋಡುತ್ತಿದೆ. ಆದರೆ, ಈ ವಂಶಪಾರಂಪರ್ಯ ಆಡಳಿತ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಈ ಕುಟುಂಬಕ್ಕೆ ಆಪ್ತರಾಗಿರುವ ಎಲ್ಲರೂ ವಂಶಾಡಳಿತದ ಧ್ವಜವನ್ನು ಮುಂದೆ ಸಾಗಿಸುತ್ತಿದ್ದಾರೆ.
ದೆಹಲಿಯಲ್ಲಿ ದೀಕ್ಷಿತರು, ಹರಿಯಾಣದಲ್ಲಿ ಹೂಡಾಗಳು, ಭಜನ್‌ಲಾಲ್‌ಜಿ ಮತ್ತು ಭನ್ಸಿ ಲಾಲ್ ಜಿ ವಂಶಾಡಳಿತ ಸಾಗುತ್ತಿದೆ. ಪಂಜಾಬ್‌ನಲ್ಲಿ ಸಿಂಗ್ ಕುಟುಂಬವಿದೆ, ರಾಜಸ್ಥಾನದ ಗೆಹ್ಲೋಟ್ ಮತ್ತು ಪೈಲಟ್ ಗಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಕುಟುಂಬ ಮತ್ತು ದಿಗ್ವಿಜಯ್ ಸಿಂಗ್ ಕುಟುಂಬ ವಂಶವನ್ನು ಬಲಪಡಿಸುತ್ತಿವೆ ಎಂದು ಟೀಕಿಸಿದರು.












Click it and Unblock the Notifications