ಹುತಾತ್ಮರಾದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 11 : ಜೀವನ್ಮರಣದ ಹೋರಾಟ ನಡೆಸಿದ ಯೋಧ ಹನುಮಂತಪ್ಪ ಕೊಪ್ಪದ (34) ಅವರು ಬೆಳಿಗ್ಗೆ 11.45ಕ್ಕೆ ಆರ್ಮಿ ಆಸ್ಪತ್ರೆ(ಆರ್ ಅಂಡ್ ಆರ್)ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗುರುವಾರ ತೀವ್ರ ಕೋಮಾಕ್ಕೆ ಜಾರಿದ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.

Lance Naik Hanumanthappa Koppad breaths last

ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಐದು ದಿನಗಳ ಕಾಲ ಹಿಮದಡಿಯಲ್ಲಿ ಹೂತುಹೋಗಿದ್ದರೂ ಜೀವಂತವಾಗಿ ಉಳಿದಿದ್ದ, ಭಾರತಾಂಬೆಯ ಹೆಮ್ಮೆಯ ಪುತ್ರ ಹನುಮಂತಪ್ಪ ಕೊಪ್ಪದ ಅವರು ದೆಹಲಿಯ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದರೂ ವಿಧಿಯ ಅಟ್ಟಹಾಸಕ್ಕೆ ಸೋಲಬೇಕಾಯಿತು.

ಹನುಮಂತಪ್ಪ ಕೊಪ್ಪದ ಅವರನ್ನು ಬದುಕಿಸಲು ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು, ಮೂತ್ರಕೋಶ ತಜ್ಞರು ಆಸ್ಪತ್ರೆಯಲ್ಲಿ ಸತತ ಪ್ರಯತ್ನ ನಡೆಸಿದ್ದರು. ಆದರೆ, ಹನುಮಂತಪ್ಪ ಅವರ ಒಂದೊಂದೇ ಅಂಗಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತ ಬಂದಿದ್ದವು. [ಹನುಮಂತಪ್ಪ ಕನ್ನಡಿಗ, ನಮನ ಸಲ್ಲಿಸಬೇಡಿ ಎಂದ ತಮಿಳು ಕುಹಕಿ]

ದೆಹಲಿಯಲ್ಲಿ ಅಂತಿಮ ನಮನ : ಹನುಮಂತಪ್ಪ ಅವರ ಮೃತದೇಹವನ್ನು ಪರೇಡ್ ಮೈದಾನದಲ್ಲಿ ಸಂಜೆ 4.30ರ ಸುಮಾರಿಗೆ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ನಂತರ ಗೋವಾ ಮುಖಾಂತರ ಹುಟ್ಟೂರು ಬೆಟದೂರಿಗೆ ತರಲಾಗುವುದು.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]


ಫಲಿಸದ ಪ್ರಾರ್ಥನೆ : ವೈದ್ಯರು ಪಟ್ಟ ಶ್ರಮ, ದೇಶದ ಕೋಟ್ಯಂತರ ಜನರ ಪ್ರಾರ್ಥನೆ, ಅವರ ಊರಾದ ಬೆಟದೂರಿನಲ್ಲಿ ಸೇರಿದಂತೆ ಹಲವಾರು ಕಡೆಗಳಲ್ಲಿ ನಡೆದ ಹೋಮ ಹವನಗಳು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಅವರ ಸಾವು ಸಂಭವಿಸುತ್ತಿದ್ದಂತೆ ಇಡೀ ದೇಶ ಶೋಕಸಾಗರದಲ್ಲಿ ಮುಳುಗಿದೆ. [ಹನುಮಂತಪ್ಪನ ಸಾವಿಗೆ ಬಿಕ್ಕಿಬಿಕ್ಕಿ ಅಳುತ್ತಿರುವ ಬೆಟದೂರು]

ಹನುಮಂತಪ್ಪ ಬದುಕುಳಿದಿದ್ದಾರೆ ಎಂಬ ಸಂತಸದಲ್ಲಿ ಅವರ ತಾಯಿ ಬಸಮ್ಮ, ಹೆಂಡತಿ ಮಹಾದೇವಿ ಮತ್ತಿತರ ಸಂಬಂಧಿಕರು ದೆಹಲಿಗೆ ತೆರಳಿದ್ದರು. ಈಗ ಅವರನ್ನು ಸಂತೈಸುವವರು ಇಲ್ಲದಂತಾಗಿದೆ. ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಕೂಡ ಊರಿನ ಜನರ ಆಕ್ರಂದನ ಮುಗಿಲುಮುಟ್ಟಿದೆ.

ಬೆಟದೂರಿನಲ್ಲಿ ಅಂತ್ಯಸಂಸ್ಕಾರ : ಹನುಮಂತಪ್ಪ ಅವರ ದೇಹವನ್ನು ಅವರ ಹುಟ್ಟಿದೂರಾದ ಬೆಟದೂರಿಗೆ ತರುವ ಎಲ್ಲ ವ್ಯವಸ್ಥೆಗಳನ್ನು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಯೋಧನ ಕುಟುಂಬಕ್ಕೆ ಸಕಲ ನೆರವು ನೀಡುವುದಾಗಿ ಧಾರವಾಡದ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ತಿಳಿಸಿದ್ದಾರೆ. [ಹನುಮಂತಪ್ಪನನ್ನು ಬದುಕಿಸಿದ್ದು ಅಸಾಧ್ಯ ಮನೋಬಲ ಛಲ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After battling for life for almost 10 days, Siachen 'braveheart' soldier Lance Naik Hanumanthappa (34) Koppad passed away on Thursday at 11.45 am, while undergoing treatment at Delhi's Research & Referral Army hospital.
Please Wait while comments are loading...