ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 29: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷೆ ಎಂ. ಕಮಲಾಕ್ಷಿ ರಾಜಣ್ಣ ನೇತೃತ್ವದ ಕರ್ನಾಟಕದ ನಿಯೋಗವು ಕೇಂದ್ರ ಕೃಷಿ ಕಾರ್ಯದರ್ಶಿ ಶೋಭನ್ ಕುಮಾರ್ ಪಟ್ನಾಯಕ್ ರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಬೆಳೆಯುವ ಮಾವು ಉತ್ಪನ್ನ ನೇರ ರಫ್ತಿಗೆ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ.

ಮಾವು ಬೆಳೆಗಾರರು ಬೆಳೆದ ಉತ್ಪನ್ನಕ್ಕೆ ಉತ್ತಮ ಮೌಲ್ಯ ಒದಗಿಸಲು ಮತ್ತು ರಫ್ತುದಾರರಿಗೆ ಉತ್ತಮ ಗುಣಮಟ್ಟದ ಹಣ್ಣು ದೊರಕಿಸುವ ನಿಟ್ಟಿನಲ್ಲಿ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಉತ್ತಮಕಾರ್ಯ ನಡೆಸುತ್ತಿದೆ. ಆದರೆ, ನೇರ ರಫ್ತು ವ್ಯವಸ್ಥೆ ಇಲ್ಲದೆ ವಿದೇಶಗಳಿಗೆ ಇಲ್ಲಿನ ವಿಶಿಷ್ಟ ತಳಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ.[ಮೈಸೂರಿನ ರಸ್ತೆ ಬದಿಯಲ್ಲೇ ಮಾವಿನಸಂತೆ..]

Karnataka seeks state-grown mangoes' direct export

ಮಾವು ಬೆಳೆಯುವುದರಲ್ಲಿ ಉತ್ತರಪ್ರದೇಶ, ಆಂಧ್ರಪ್ರದೇಶ ನಂತರದ ಸ್ಥಾನದಲ್ಲಿರುವ ಕರ್ನಾಟಕವು ಆಲ್ಫೊಸೋ, ಬಂಗಾನ್ ಪಲ್ಲಿ, ಮಲ್ಲಿಕಾ, ರಸಪುರಿ, ತೋತಾಪುರಿ ಸೇರಿದಂತೆ ವಿವಿಧ ತಳಿಗಳಿಗೆ ಹೆಸರುವಾಸಿಯಾಗಿದೆ. ಸುಮಾರು 2 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.[ಸೌದಿ ಮಾವು ಮೇಳ: ಮಂಡ್ಯ ಮಾವಿಗೆ ಬೇಡಿಕೆ]

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕಾ ಇಲಾಖೆ, ಅಪೆಡಾ ಮತ್ತು ಇನೋವಾ ಅಗ್ರಿ ಬಯೋ ಪಾರ್ಕ್ ನ ಸದಸ್ಯರು ನಿಯೋಗದಲ್ಲಿದ್ದರು. ಕಮಲಾಕ್ಷಿ ರಾಜಣ್ಣ, ಕದಿರೇಗೌಡ, ಕೆಪಿ ವೆಂಕಟೇಶ್, ಕಾಂತರಾಜ್ ಹಾಗೂ ಕೆಎಸ್ ಎಂಡಿಎಂಸಿಯ ಗುಣವಂತ ಅವರು ಕೃಷಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ಈ ವರ್ಷ ಸುಮಾರು 14 ರಿಂದ 15 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಮಾವು ಉತ್ಪನ್ನ ಕಾಣುವ ನಿರೀಕ್ಷೆ ಕರ್ನಾಟಕಕ್ಕಿದೆ.[ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

ಸದ್ಯಕ್ಕೆ ರಾಜ್ಯದಲ್ಲಿ ಬೆಳೆಯುವ ಮಾವು ಹಾಗೂ ಮಾವಿನ ಉತ್ಪನ್ನಗಳನ್ನು ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ರಫ್ತು ಮಾಡಿ ನಂತರ ಅಲ್ಲಿಂದ ಬೇರೆಡೆಗೆ ಕಳಿಸುವ ವ್ಯವಸ್ಥೆಯಿದೆ. ಇದರ ಬದಲು ನೇರ ರಫ್ತು ಸೌಲಭ್ಯಕ್ಕಾಗಿ ರಾಜ್ಯ ಬೇಡಿಕೆ ಸಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A delegation from Karnataka State Mango Development and Marketing Corporation (KSMDMC) led by its chairperson Kamalakshi Rajanna and Managing Director Kadire Gowda on Friday met Union Agriculture Secretary Shobhan Kumar Patnaik here and sought a royal route for exporting the fruits produced in the state.
Please Wait while comments are loading...