• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗ್ನಲ್ ಜಂಪ್ ಮಾಡುವವರಿಗೆ ಕರೀನಾ ಕಪೂರ್‌ ಕೊಡ್ತಾರೆ ಎಚ್ಚರಿಕೆ!

|
Google Oneindia Kannada News

ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಲು ದೆಹಲಿ ಪೊಲೀಸರು ಹೊಸ ಮಾರ್ಗವನ್ನು ಕಂಡು ಹಿಡಿದಿದ್ದಾರೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದನ್ನು ತಡೆಯಲು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟಿ ಕರೀನಾ ಫೋಟೋವನ್ನು ಪ್ರದರ್ಶಿಸಲಾಗುತ್ತಿದೆ.

ಮುಖ್ಯ ರಸ್ತೆಗಳಲ್ಲಿ ಸಿಗ್ನಲ್ ಬಿದ್ದ ಬಳಿಕ ಯಾರಾದರೂ ವಾಹನ ಚಲಾಯಿಸಿದರೆ ಕೆಂಪು ಬಣ್ಣದ ಲೈಟ್ ಜೊತೆಗೆ ಕರೀನಾ ಫೋಟೋ ಹಾಗೂ ಆಕೆಯ ಧ್ವನಿಯಲ್ಲಿ ಎಚ್ಚರಿಕೆ ಸಂದೇಶ ಕೇಳಿಸುತ್ತದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Breaking; ಭಾರೀ ಮಳೆ, ಮಡಿಕೇರಿ-ಮಂಗಳೂರು ರಸ್ತೆ ಬಂದ್Breaking; ಭಾರೀ ಮಳೆ, ಮಡಿಕೇರಿ-ಮಂಗಳೂರು ರಸ್ತೆ ಬಂದ್

ಗಂಭೀರ ಸಂದೇಶಕ್ಕೆ ಹಾಸ್ಯದ ಸಿಂಚನವನ್ನು ನೀಡುವ ಮೂಲಕ ದೆಹಲಿ ಪೊಲೀಸರು ಬಾಲಿವುಡ್ ನಟಿ ಕರೀನಾ ಕಪೂರ್ ಅವರ 'ಕಭಿ ಖುಷಿ ಕಭಿ ಗಮ್' ಚಿತ್ರದ ಅಪ್ರತಿಮ ಪಾತ್ರದ ಸಹಾಯವನ್ನು ತೆಗೆದುಕೊಂಡಿದ್ದಾರೆ.

ದೆಹಲಿ ಪೊಲೀಸರ ಅಧಿಕೃತ ಖಾತೆಯ ಟ್ವೀಟ್‌ನಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವವರು ಮತ್ತು ರಸ್ತೆಯಲ್ಲಿ ಇತರರಿಗೆ ಹಾನಿ ಉಂಟುಮಾಡುವವರು ಕೆಂಪು ದೀಪಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಈ ಕೆಂಪು ಲೈಟ್ ಹೈಲೇಟ್ ಮಾಡಲು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ವಿನೂತ ಪ್ರಯತ್ನ ಮಾಡಿದ್ದಾರೆ.

ರೆಡ್ ಲೈಟ್‌ನ ಇದ್ದಾಗಲೂ ವೇಗವಾಗಿ ಹೋಗುವ ಕಾರು ಅಥವಾ ಇನ್ನಿತರ ವಾಹನಗಳಿಗೆ ಸಂದೇಶ ನೀಡುತ್ತದೆ. ಅದು ಕೆಂಪು ದೀಪವನ್ನು ದಾಟಿದ ತಕ್ಷಣ, ಕರೀನಾ ಪಾತ್ರದ ಫೋಟೋ ಚಿತ್ರದ ಕೆಂಪು ದೀಪದ ಮೇಲೆ ಕಾಣಿಸಿಕೊಳ್ಳುತ್ತದೆ. ''ಯಾರಿದು ನನ್ನನ್ನು ತಿರುಗಿ ನೋಡದೇ ಹೋಗುತ್ತಿದ್ದಾರೆ'' ಎಂದು ಹೇಳುವ ಸಂದೇಶ ಕೇಳಿಸುತ್ತದೆ.

Kareena Kapoor Warning Message For Signal Jumpers

ಕರಣ್ ಜೋಹರ್ ನಿರ್ದೇಶನದ ಚಿತ್ರ 'ಕಭಿ ಖುಷಿ ಕಭಿ ಗಮ್' 2001 ರಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಷನ್ ಸಹ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಭಾರತೀಯ ಕುಟುಂಬದ ಕಥೆಯ ಸುತ್ತ ಹೆಣೆಯಲಾಗಿದೆ.

Recommended Video

   Swiggy ಹಾಗು Zomato ಹುಡುಗರು ಒಟ್ಟಾಗಿ ಹೋಗುತ್ತಿರುವ ವೀಡಿಯೋ ವೈರಲ್ *Cricket | OneIndia Kannada
   English summary
   Bollywood actress Kareena Kapoor has nothing to do with the Delhi Police but Kareena Kapoor's iconic Poo has, as the Delhi Police, known for their innovative ways to create awareness about various subjects, have now taken Poo's help to make people aware of traffic regulations. Learn more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X