Get Updates
Get notified of breaking news, exclusive insights, and must-see stories!

ಭಾರತದಲ್ಲಿ ಐಫೋನ್ ಲಭ್ಯತೆ ಹಾಗೂ ಆಫರ್

ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್ ಫೋನುಗಳ ಬಿಡುಗಡೆ

ನವದೆಹಲಿ, ಸೆಪ್ಟೆಂಬರ್ 18: ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಆ್ಯಪಲ್ ಬ್ರಾಂಡ್ ನಿಂದ ಈ ವರ್ಷದ ದೊಡ್ಡ ನಿರೀಕ್ಷೆಯಾಗಿದ್ದ ಆ್ಯಪಲ್ 8 ಮತ್ತು ಆ್ಯಪಲ್ 8 ಪ್ಲಸ್ ಫೋನ್ ಗಳು ಸೆಪ್ಟೆಂಬರ್ 29ರಿಂದ ಭಾರತದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.

ಸೆಪ್ಟೆಂಬರ್ 29ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿಈ ಫೋನ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ಹಿಂದೆ, ಆ್ಯಪಲ್ ಫೋನ್ ಗಳನ್ನು ಭಾರತದಲ್ಲಿ ಮಧ್ಯರಾತ್ರಿ ಬಿಡುಗಡೆ ಮಾಡುತ್ತಿದ್ದ ಕಂಪನಿಯು ಈ ಬಾರಿ ಆ ಫೋನ್ ಗಳನ್ನು ಸೆ. 29ರಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲು ನಿಶ್ಚಯಿಸಿದೆ.

iPhone 8 & iPhone 8 Plus purchasing strategy by Apple

ಆನ್ ಲೈನ್ ಹಾಗೂ ಆಫ್ ಲೈನ್ ಗಳೆರಡಲ್ಲೂ ಫೋನ್ ಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಕಂಪನಿ, ಬಿಡುಗಡೆಯಾದ ನಂತರದ ನಿಮಿಷಗಳಲ್ಲೇ ಗ್ರಾಹಕರಿಗೆ ಯಾವುದೇ ಕಿರಿಕಿರಿ, ತಡವಿಲ್ಲದೆ ಫೋನ್ ಗಳನ್ನು ಲಭ್ಯವಾಗಿಸಲು ಪಣ ತೊಟ್ಟಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ತಿಳಿಸಿದೆ.

ಅದರಂತೆ, ದೇಶಾದ್ಯಂತ ಇರುವ 10 ಸಾವಿರ ಆ್ಯಪಲ್ ರಿಟೇಲ್ ಅಂಗಡಿಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದ್ದು ಯಾವುದೇ ಅಡೆ-ತಡೆಯಿಲ್ಲದೆ ಗ್ರಾಹಕರಿಗೆ ಐಫೋನ್ 8 ಹಾಗೂ ಐಫೋನ್ 8 ಪ್ಲಸ್ ಸಿಗುವಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಐಫೋನ್8, ಐಫೋನ್ 8 ಪ್ಲಸ್ ಹಾಗೂ ಆ್ಯಪಲ್ ವಾಚ್ ಗಳನ್ನು ಆನ್ ಲೈನ್ ಮೂಲಕ ಸಿಟಿಬ್ಯಾಂಕ್ ಕಾರ್ಡ್ ಉಪಯೋಗಿಸಿ ಪಡೆದರೆ, 10 ಸಾವಿರ ರು. ಕ್ಯಾಶ್ ಬ್ಯಾಕ್ ಆಫರನ್ನೂ ಕಂಪನಿ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+