25 ಬಗೆಯ ಟೀಯಿಂದ ರೈಲಿನ ಪ್ರಯಾಣ ಇನ್ನಷ್ಟು ಸುಖಕರ

Posted By:
Subscribe to Oneindia Kannada

ನವದೆಹಲಿ,ಫೆಬ್ರವರಿ,09: ರೈಲಿನ ಪ್ರಯಾಣ ಎಂದಾಕ್ಷಣ ಏನೋ ಒಂದು ರೀತಿ ಖುಷಿ. ಬಗೆಬಗೆ ತಿಂಡಿಗಳು, ಪ್ರತಿ ನಿಲ್ದಾಣದಲ್ಲಿಯೂ ಚಾಯ್ ಚಾಯ್ ಬಿಸಿ ಬಿಸಿ ಚಾಯ್, ವಾಟರ್ ವಾಟರ್ ಎನ್ನುವ ಮಾರಾಟಗಾರರು, ಹೊಸ ಹೊಸ ಮುಖದೊಂದಿಗೆ ಮಾತುಕತೆ, ಒಟ್ನಲ್ಲಿ ರೈಲು ಹತ್ತಿದ ಮೇಲೆ ಟೀ ಕುಡಿಯದೆ ಇದ್ದರೆ, ಬೇರೆಯವರೊಂದಿಗೆ ಮಾತನಾಡದಿದ್ದರೆ ಏನೋ ಅಸಮಾಧಾನ.

ಯಾಕೆ ರೈಲು ಪ್ರಯಾಣದ ಬಗ್ಗೆ ಮಾತನಾಡ್ತಿದ್ದಾರಲ್ಲ ಎಂದು ಯೋಚಿಸ್ತಿದ್ದೀರಾ? ಏನಿಲ್ಲಾ ರೀ ಭಾರತೀಯ ರೈಲ್ವೆ ಇಲಾಖೆಯು ನಿಮ್ಮ ರೈಲು ಪ್ರಯಾಣವನ್ನು ಇನ್ನಷ್ಟು ಸುಖಕರವಾಗಿಸಲು, ಬೆಚ್ಚಗಾಗಿಸಲು ನಿರ್ಧರಿಸಿದ್ದು, ನಿಮ್ಮ ಗಂಟಲಲ್ಲಿ ವಿವಿಧ ಬಗೆಯ 25 ಪ್ರಕಾರದ ಟೀಯನ್ನು ಇಳಿಸಲು ಸಿದ್ದವಾಗಿದೆ.[ಚಹಾ ಮಾರುವ 'ಚೇಟ'ನ ಬದುಕು ಬೆಂಗಳೂರಿನಲ್ಲಿ ಹಸನು!]

Indian Railway trains to get 25 varieties of tea

ಚಹಾದ ವಿಧಗಳು :

ಕೆಫೆ ಸಮೂಹವಾದ ಚಾಯೋಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಐಆರ್ ಸಿಟಿಸಿ (Indian Railway Catering and Tourism Corporation)ಯು 'ದೇಸಿ ಚಾಯ್ ನಿಂದ ಹಿಡಿದು, ಆಮ್ ಪಾಪಡ್ ಚಾಯ್, ಹರಿ ಮಿರ್ಚ್ ಚಾಯ್, ಕುಲ್ಹಾಡ್ ಚಾಯ್, ಶುಂಠಿ ತುಳಸಿ ಚಾಯ್, ಜೇನು ಶುಂಠಿ ನಿಂಬೆ' ಇಂತಹ ಹಲವು ಬಗೆಯ ಚಾಯ್ ಗಳನ್ನು ಒದಗಿಸಲಿದೆ.[ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ]

ಆರ್ಡರ್ ಮಾಡಬಹುದು?

ನೀವು ಕುಳಿತ ಜಾಗದಲ್ಲಿಯೇ ನಿಮಗೆ ಬೇಕಾದ ಚಾಯ್ ತರೆಸಿಕೊಳ್ಳಬಹುದು. ಭಾರತೀಯ ರೈಲ್ವೆ ಇಲಾಖೆಯ ಕೇಟರಿಂಗ್ ಆಂಡ್ ಟ್ಯೂರಿಸಂ ಕಾರ್ಪೋರೇಷನ್ ಬಿಡುಗಡೆ ಮಾಡಿರುವ ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಬಹುದು. 300 ರೂ ಗೂ ಹೆಚ್ಚು ಆರ್ಡರ್ ಮಾಡಿದ್ದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಐಆರ್ ಸಿಟಿಸಿ ಅಧ್ಯಕ್ಷ ಅರುಣ್ ಕುಮಾರ್ ಮನೂಚ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian Railway Catering and Tourism Corporation have decide to to offer 25 varieties of tea inside train coaches. Desi Chai to quirky ones like aam papad chai, Hair mirch chai, adrak tulsi chai etc.
Please Wait while comments are loading...