• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸಂಕಷ್ಟ: ಡೆಡ್ಲಿ ಚೀನಾವನ್ನು ಹಿಂದಿಕ್ಕುವತ್ತಾ ಭಾರತ!

|

ದೆಹಲಿ, ಮೇ 15; ಶುಕ್ರವಾರ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81,970. ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನ.

ಬಹುಶಃ ಇಂದು ಸಂಜೆ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಭಾರತ ಮುಂದೆ ಸಾಗಲಿದೆ. ಕಳೆದ ಹತ್ತು ದಿನಗಳ ಅಂಕಿ ಅಂಶ ಗಮನಿಸಿದರೆ ಭಾರತದಲ್ಲಿ ಹೊಸ ಕೇಸ್‌ಗಳ ಸಂಖ್ಯೆ ಅಧಿಕವಾಗುತ್ತಿದೆ.

ಭಾರತದಲ್ಲಿ ಒಂದೇ ದಿನ 3967 ಕೇಸ್ ಪತ್ತೆ, 100 ಮಂದಿ ಸಾವು

ಇದು ಸಹಜವಾಗಿ ಆತಂಕ ಮೂಡಿಸಿದೆ. ಜನಸಂಖ್ಯೆಯಲ್ಲಿ ದೊಡ್ಡ ದೇಶವೆನಿಸಿಕೊಂಡಿರುವ ಭಾರತಕ್ಕೆ, ಕೊರೊನಾ ದೊಡ್ಡ ಮಟ್ಟದ ಕಂಟಕ ತಂದೊಡುತ್ತಾ ಎಂಬ ಭಯ ಕಾಡುತ್ತಿದೆ. ಅಷ್ಟಕ್ಕೂ, ಚೀನಾ ಮತ್ತು ಭಾರತದ ನಡುವೆ ಕೊರೊನಾ ಅಂಕಿ ಅಂಶ ಏನು ಹೇಳುತ್ತಿದೆ ಎಂದು ನೋಡೋಣ. ಮುಂದೆ ಓದಿ.....

ಚೀನಾದ ಜೊತೆ ಎಲ್ಲಾ ರೀತಿಯ ಸಂಬಂಧ ಕಳೆದುಕೊಳ್ಳಲು ಮುಂದಾದ ಡೊನಾಲ್ಡ್ ಟ್ರಂಪ್

ಚೀನಾದಲ್ಲಿ ಎಷ್ಟು ಕೇಸ್ ವರದಿಯಾಗಿದೆ?

ಚೀನಾದಲ್ಲಿ ಎಷ್ಟು ಕೇಸ್ ವರದಿಯಾಗಿದೆ?

ಚೀನಾದಲ್ಲಿ ಇದುವರೆಗೂ 82,933 ಕೇಸ್‌ಗಳು ದಾಖಲಾಗಿದೆ ಎಂದು ವರದಿಗಳು ಹೇಳುತ್ತಿದೆ. 4,633 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು 91 ಕೇಸ್ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ವಿಚಾರದಲ್ಲಿ ಚೀನಾ ವಂಚಿಸುತ್ತಿದೆ, ಅಲ್ಲಿ ಅಪಾರ ಸಾವು ಸಂಭವಿಸಿದೆ ಆರೆ ಹೊರಜಗತ್ತಿಗೆ ಮಾಹಿತಿ ಕೊಡುತ್ತಿಲ್ಲ ಎಂಬ ಆರೋಪ ಇದ್ದರೂ ಪ್ರಸ್ತುತ ಅಧಿಕೃತ ಎನಿಸಿಕೊಂಡಿರುವುದು ಇಷ್ಟೇ.

ಒಂದು ತಿಂಗಳಲ್ಲಿ ಭೀಕರ ಸ್ಥಿತಿ ತಲುಪಿದ್ದ ಚೀನಾ

ಒಂದು ತಿಂಗಳಲ್ಲಿ ಭೀಕರ ಸ್ಥಿತಿ ತಲುಪಿದ್ದ ಚೀನಾ

ಡಿಸೆಂಬರ್‌ ತಿಂಗಳಲ್ಲಿ ಕೊರೊನಾ ವೈರಸ್‌ ಚೀನಾದಲ್ಲಿ ಪತ್ತೆಯಾಗಿತ್ತು. ಜನವರಿ 22ನೇ ತಾರೀಕಿನವರೆಗೂ 571 ಕೇಸ್‌ಗಳು ದಾಖಲಾಗಿದ್ದವು. ಅಲ್ಲಿಂದ ಒಂದು ತಿಂಗಳು ಅಂದ್ರೆ ಮಾರ್ಚ್ 21 ಬರುವಷ್ಟರಲ್ಲಿ ಒಟ್ಟು ಸೋಂಕಿತರ ಸಂಖ್ಯೆ 80,054ಕ್ಕೆ ಜಗಿದಿತ್ತು. ಇಲ್ಲಿಂದ ಮೇ 11ರವರೆಗೂ 82929 ಕೇಸ್‌ಗಳು ವರದಿಯಾಗಿದೆ. ಚೀನಾದಲ್ಲಿ ಈಗ ಸಂಪೂರ್ಣವಾಗಿ ಕೊರೊನಾ ನಿಯಂತ್ರಣದಲ್ಲಿದೆ ಎನ್ನುವುದು ವಾಸ್ತವ.

ಚೀನಾಗಿಂತ ಭಾರತ ಉತ್ತಮವಾಗಿ ನಿಭಾಯಿಸಿದೆ

ಚೀನಾಗಿಂತ ಭಾರತ ಉತ್ತಮವಾಗಿ ನಿಭಾಯಿಸಿದೆ

ಚೀನಾಗೆ ಹೋಲಿಸಿಕೊಂಡರೆ ಭಾರತ ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿದೆ. ಜನವರಿಯಲ್ಲಿ ಭಾರತಕ್ಕೆ ಕೊರೊನಾ ಪ್ರವೇಶ ಆಗಿತ್ತು. ಆದರೆ, ಅದರ ತೀವ್ರತೆ ಹೆಚ್ಚಾಗಿದ್ದು ಮಾರ್ಚ್ ಅಂತ್ಯದಲ್ಲಿ. ಮಾರ್ಚ್ 30ರಂದು ದೇಶದಲ್ಲಿ ಒಟ್ಟು 1251 ಕೇಸ್ ವರದಿಯಾಗಿತ್ತು. ಅಲ್ಲಿಂದ ಒಂದು ತಿಂಗಳು ಅಂದ್ರೆ ಏಪ್ರಿಲ್ 30ಕ್ಕೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34863ಕ್ಕೆ ಏರಿಕೆಯಾಗಿತ್ತು. ಇದೀಗ, ಮೇ 14ರಷ್ಟಿಗೆ ಆ ಸಂಖ್ಯೆ ಹೆಚ್ಚಾಗಿದೆ.

ಸಾವಿನ ಸಂಖ್ಯೆಯಲ್ಲಿ ಹಿಡಿತ ಸಾಧಿಸಿದ ಭಾರತ

ಸಾವಿನ ಸಂಖ್ಯೆಯಲ್ಲಿ ಹಿಡಿತ ಸಾಧಿಸಿದ ಭಾರತ

80 ಸಾವಿರ ಸೋಂಕಿತರು ವರದಿಯಾಗಿರುವ ಚೀನಾದಲ್ಲಿ ಒಟ್ಟು 4600ಕ್ಕೂ ಅಧಿಕ ಜನ ಬಲಿಯಾದರು. ಆದರೆ, ಭಾರತದಲ್ಲಿ 80 ಸಾವಿರ ಸೋಂಕಿತರು ವರದಿಯಾಗಿದ್ದರೂ ಸಾವಿನ ಸಂಖ್ಯೆ 2,649 ಆಗಿದೆ. ಈ ವಿಚಾರದಲ್ಲಿ ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಹಿಡಿತ ಸಾಧಿಸಿದೆ.

ಮುಂದಿನ ದಿನದಲ್ಲಿ ಭಾರತಕ್ಕೆ ಸವಾಲು

ಮುಂದಿನ ದಿನದಲ್ಲಿ ಭಾರತಕ್ಕೆ ಸವಾಲು

ಸದ್ಯಕ್ಕೆ ಚೀನಾಗಿಂತ ಭಾರತ ಕೊರೊನಾವನ್ನು ಉತ್ತಮವಾಗಿ ನಿಭಾಯಿಸಿದೆ ಎಂದು ಹೇಳಬಹುದು. ಆದರೆ, ಮುಂದಿನ ದಿನದಲ್ಲಿ ಇದನ್ನು ಹೇಳಲು ಕಷ್ಟವಾಗಬಹುದು. ಏಕಂದ್ರೆ ಭಾರತದಲ್ಲಿ ಕಳೆದ ಹತ್ತು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಕಾಣುತ್ತಿದೆ. ಮುಂಬೈ, ಚೆನ್ನೈ, ಅಹಮದಬಾದ್, ಇಂದೋರ್ ನಗರಗಳು ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ಪ್ರತಿದಿನ 3.5 ರಿಂದ 4 ಸಾವಿರವರೆಗೂ ಕೇಸ್ ದಾಖಲಾಗುತ್ತಿದೆ. ಇದೇ ವೇಗದಲ್ಲಿ ಸಾಗಿದರೆ ಇತರೆ ದೇಶಗಳಿಂದ ಭಾರತ ಹೆಚ್ಚು ಸೋಂಕಿತರನ್ನು ಹೊಂದಬೇಕಾಗುತ್ತೆ.

English summary
India almost near to china in coronavirus cases tally. by today evening or tomorrow morning india will cross the china number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X