ಭಾರತದಲ್ಲಿ ಕೊರೊನಾ ವೈರಸ್ 3ನೇ ಹಂತ: ಹೊರಬಿತ್ತು ಆಘಾತಕಾರಿ ಅಂಶ

ನವದೆಹಲಿ, ಏಪ್ರಿಲ್.13: ಕೊರೊನಾ ವೈರಸ್ ಎಂಬ ಮಹಾಮಾರಿ ಭಾರತದಲ್ಲಿ ಸಮುದಾಯದ ಮಟ್ಟಕ್ಕೆ ಅಂದರೆ ಮೂರನೇ ಹಂತಕ್ಕೆ ಕಾಲಿಟ್ಟಿಯಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಆಘಾತಕಾರಿ ಅಂಶವೊಂದು ಹೊರ ಬಿದ್ದಿದೆ.

ಕಳೆದ ನಾಲ್ಕು ದಿನಗಳಲ್ಲೇ ದೇಶದ 80 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ವರದಿಯಾಗಿದೆ. ಇದರಿಂದ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ಇರುವ ಜಿಲ್ಲೆಗಳ ಸಂಖ್ಯೆಯು 364ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಇದುವರೆಗೂ ಕೊರೊನಾ ವೈರಸ್ ಎಂಬ ಹೆಮ್ಮಾರಿಗೆ 273 ಜನರು ಪ್ರಾಣ ಬಿಟ್ಟಿದ್ದು, 8,447 ಮಂದಿ ಸೋಂಕಿತರಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

India Story: Coronavirus Spread 80 More Districts In Past Four Days

83 ಜಿಲ್ಲೆಗಳಿಗೂ ವ್ಯಾಪಿಸಿದ ಕೊರೊನಾ ಹೆಮ್ಮಾರಿ:

ಕಳೆದ ಏಪ್ರಿಲ್.02ರಂದು ದೇಶದ 211 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದರು ಅದಾಗಿ ನಾಲ್ಕು ದಿನಗಳಲ್ಲೇ 83 ಹೊಸ ಜಿಲ್ಲೆಗಳು ಸೋಂಕಿತರು ಇರುವ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಏಪ್ರಿಲ್.06ರ ವೇಳೆಗೆ ದೇಶದ 284 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಮಾರ್ಚ್.22ರ ವೇಳೆಗೆ ದೇಶದ 75 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಾರ್ಚ್.29ರ ಹೊತ್ತಿಗಾಗಲೇ 160 ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸಿತ್ತು. ಇನ್ನು, ಕಳೆದ 24 ಗಂಟೆಗಳಲ್ಲೇ 34 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, 909 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+