ಎಫ್-16 ಯುದ್ಧ ವಿಮಾನ ದುರ್ಬಳಕೆ: ಪಾಕ್ ವಿರುದ್ಧ ಅಮೆರಿಕಕ್ಕೆ ಸಾಕ್ಷ್ಯ ನೀಡಿದ ಭಾರತ

ನವದೆಹಲಿ, ಮಾರ್ಚ್ 2: ಭಾರತದ ಮೇಲೆ ದಾಳಿ ಮಾಡುವಾಗ ಪಾಕ್ ಎಫ್ 16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿರುವ ಕುರಿತು ಅಮೆರಿಕಕ್ಕೆ ಭಾರತ ಸಾಕ್ಷ್ಯ ಒದಗಿಸಿದೆ.

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿದ ಅಮೆರಿಕಾ ನಿರ್ಮಿತ ಎಫ್-16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿಕೊಂಡಿತ್ತು. ಅಮೆರಿಕಾದ ಅನುಮತಿ ಇಲ್ಲದೆ ವಿಮಾನವನ್ನು ಬಳಕೆ ಮಾಡಿತ್ತು.

ಹಾಗಾಗಿ ವಿಮಾನ ಪತನಗೊಂಡಿರುವ ವಿಚಾರವನ್ನು ಕೂಡ ಪಾಕ್ ಮುಚ್ಚಿಟ್ಟಿತ್ತು. ಭಾರತೀಯ ಸೇನಾಪಡೆಯ ಬ್ರಿಗೇಡ್​ ಮತ್ತು ಬೆಟಾಲಿಯನ್​ ಮೇಲೆ ದಾಳಿ ಮಾಡಲು ಪಾಕ್​ ವಾಯುಪಡೆ ಯೋಧರು ಯತ್ನಿಸಿದ್ದರು ಎಂದು ಭಾರತ ಅಮೆರಿಕಕ್ಕೆ ದೂರು ನೀಡಿದೆ.

India shares F-16 evidence with US

ಕೆಲ ದಿನಗಳ ಹಿಂದೆ ಭಾರತದೊಂದಿಗೆ ನಡೆದಿದ್ದ ವೈಮಾನಿಕ ಪೈಪೋಟಿಯಲ್ಲಿ ಪಾಕಿಸ್ತಾನ ಎಫ್​-16 ಯುದ್ಧ ವಿಮಾನಗಳನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿತ್ತು.

ಮಿಗ್​-21 ವಿಮಾನದ ಮೂಲಕ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಆ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಪಾಕಿಸ್ತಾನ ಈ ವಿಷಯವನ್ನು ಅಲ್ಲಗಳೆದಿತ್ತು.

ಕೊನೆಗೆ ಭಾರತದ ಗಡಿಯೊಳಗೆ ಬಿದ್ದಿದ್ದ ಎಫ್​-16 ಯುದ್ಧ ವಿಮಾನದ ಅವಶೇಷವನ್ನು ಭಾರತೀಯ ವಾಯುಪಡೆ ಅಧಿಕಾರಿಗಳು ಪ್ರದರ್ಶಿಸಿದ್ದರು. ಅಲ್ಲದೆ, ಪಾಕ್​ ವಾಯುಪಡೆಯ ವಿಮಾನಗಳು ರಾಜೌರಿಯಲ್ಲಿ ಭಾರತದ ವಾಯುಗಡಿ ಪ್ರವೇಶಿಸಿದ್ದವು.

ಅವುಗಳನ್ನು ಹಿಮ್ಮೆಟ್ಟಿಸಲು ಮಿಗ್​-21 ಬೈಸನ್​, ಎಸ್​ಯು-20 ಎಂಕೆಐ ಮತ್ತು ಮಿರಾಜ್​ ವಿಮಾನಗಳನ್ನು ಕಳುಹಿಸಲಾಗಿತ್ತು. ಮಿಗ್​-21 ಬೈಸನ್​ ವಿಮಾನದಲ್ಲಿದ್ದ ಅಭಿನಂದನ್​ ಎಫ್​-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು ಎಂದು ಭಾರತ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+