Get Updates
Get notified of breaking news, exclusive insights, and must-see stories!

ಭಾರತ-ರಷ್ಯಾ ಎಕೆ47 203 ರೈಫಲ್‌ ಒಪ್ಪಂದ ಅಂತಿಮ: ಭಾರತಕ್ಕೆ ಬರಲಿದೆ ಡೆಡ್ಲಿ ರೈಫಲ್

ಮಾಸ್ಕೋ, ಸೆಪ್ಟೆಂಬರ್ 03: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದ್ಯದಲ್ಲೇ ಮಾಸ್ಕೋಗೆ ಭೇಟಿ ನೀಡುತ್ತಿರುವಾಗ ಭಾರತ ಮತ್ತು ರಷ್ಯಾ ಎಕೆ -47 203 ರೈಫಲ್‌ಗಳನ್ನು ಭಾರತದಲ್ಲೇ ತಯಾರಿಸಲು ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ರಷ್ಯಾದ ಅಧಿಕೃತ ಮಾಧ್ಯಮ ಗುರುವಾರ ವರದಿ ಮಾಡಿದೆ.

ಎಕೆ -47 203 ರೈಫಲ್‌ ಸದ್ಯ ರೈಫಲ್‌ಗಳಲ್ಲೇ ಅತ್ಯಂತ ಅಪಾಯಕಾರಿಯಾಗಿದ್ದು, ಎಕೆ -47 ರೈಫಲ್‌ನ ಇತ್ತೀಚಿನ ಮತ್ತು ಅತ್ಯಾಧುನಿಕ ಆವೃತ್ತಿಯಾಗಿದೆ. ಇದು ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆ (ಐಎನ್‌ಎಸ್ಎಎಸ್) 5.56x45 ಎಂಎಂ ಆಕ್ರಮಣಕಾರಿ ರೈಫಲ್ ಅನ್ನು ಬದಲಾಯಿಸುತ್ತದೆ.

ಭಾರತೀಯ ಸೈನ್ಯವು ಸುಮಾರು 7,70,000 ಎಕೆ -47 203 ರೈಫಲ್‌ಗಳ ಅವಶ್ಯಕತೆಯನ್ನು ಹೊಂದಿದೆ. ಅದರಲ್ಲಿ 1,00,000 ರೈಫಲ್‌ಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುವುದು ಮತ್ತು ಉಳಿದವುಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ರಷ್ಯಾದ ಸರ್ಕಾರಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ತಿಳಿಸಿದೆ.

India-Russia Finalise AK-47 203 Rifles Deal: Report

ಭಾರತದಲ್ಲಿ ತಯಾರಾಗಲಿರುವ ಎಕೆ -47 203 ರೈಫಲ್‌ಗಳನ್ನ ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL), ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ಜಂಟಿಯಾಗಿ ತಯಾರಿಸಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+