ದೈನಂದಿನ ಕೊವಿಡ್ ಸಾವು: ನಾಲ್ಕನೇ ಸ್ಥಾನದಲ್ಲಿ ಭಾರತ
ದೆಹಲಿ, ಜುಲೈ 10: ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಜಗತ್ತಿನ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತ, ಪ್ರತಿದಿನ ಸಾವಿನ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
Recommended Video
ಭಾರತಕ್ಕೂ ಮುಂಚೆ ಅಮೆರಿಕ, ಬ್ರೆಜಿಲ್ ಹಾಗೂ ಮೆಕ್ಸಿಕೋ ದೇಶಗಳಲ್ಲಿ ದೈನಂದಿನ ಸಾವು ಹೆಚ್ಚಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 475 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆ ಮಾಡಿದೆ.
ಬ್ರೆಜಿಲ್‌ನಲ್ಲಿ ನಿನ್ನೆ ಒಂದೇ ದಿನ 1199 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ 960 ಮಂದಿ ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ 782 ಜನರು ಬಲಿಯಾಗಿದ್ದಾರೆ. ಭಾರತದಲ್ಲಿ 475 ಪ್ರಾಣಬಿಟ್ಟಿದ್ದಾರೆ.

ಇಲ್ಲಿಯವರೆಗೂ ಭಾರತದಲ್ಲಿ 21,604 ಜನರು ಕೊರೊನಾ ಸೋಂಕಿನಿಂದ ಪ್ರಾಣಕಳೆದುಕೊಂಡಿದ್ದಾರೆ. ಅತಿ ಹೆಚ್ಚು ಕೊವಿಡ್ ಸಾವು ಕಂಡಿರುವ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ವರದಿಯಾಗಿರುವ ದೇಶಗಳ ಪಟ್ಟಿ
ಅಮೆರಿಕದಲ್ಲಿ ಒಟ್ಟು ಸಾವು 135,822
ಬ್ರೆಜಿಲ್‌ನಲ್ಲಿ ಒಟ್ಟು ಸಾವು 69,254
ಬ್ರಿಟನ್‌ನಲ್ಲಿ ಒಟ್ಟು ಸಾವು 44,602
ಇಟಲಿ ದೇಶದಲ್ಲಿ ಒಟ್ಟು ಸಾವು 34,926
ಮೆಲ್ಸಿಕೋದಲ್ಲಿ ಒಟ್ಟು ಸಾವು 32,796
ಫ್ರಾನ್ಸ್ ದೇಶದಲ್ಲಿ ಒಟ್ಟು ಸಾವು 29,979
ಸ್ಪೇನ್‌ನಲ್ಲಿ ಒಟ್ಟು ಸಾವು 28,401
ಭಾರತದಲ್ಲಿ ಒಟ್ಟು ಸಾವು 21,604












Click it and Unblock the Notifications